ವೆಂಕಟೇಶ್ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳೇ ಹೊಣೆ

ಶನಿವಾರ, 2 ಸೆಪ್ಟಂಬರ್ 2023 (16:00 IST)
ಹಾಸನದಲ್ಲಿ ಕಾಡಾನೆ ದಾಳಿಗೆ ಶಾರ್ಪ್ ಶೂಟರ್ ವೆಂಕಟೇಶ್ ಸಾವು ಪ್ರಕರಣ ಸಂಬಂಧ ಅರಣ್ಯ‌ ಇಲಾಖೆಯ ವಿರುದ್ಧ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ. ಹಾಸನದಲ್ಲಿ ಮಲೆನಾಡು ಭಾಗದ ಪ್ರಮುಖ ಹೋರಾಟಗಾರರು ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದಾರೆ.. ಅವರ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೇ ನೇರ ಹೊಣೆ. ಅವರ ವಿರುದ್ಧ ಈಗಾಗಲೇ FIR ಕೂಡ ಆಗಿದೆ. ಅವರನ್ನ ಅಮಾನತ್ತಿನಲ್ಲಿಟ್ಟು ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಅಧಿಕಾರಿಗಳ‌ ಮೇಲೆ ನಮಗೆ ವಿಶ್ವಾಸವಿಲ್ಲ, ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯಿಸಿದ್ದಾರೆ. ಇನ್ನು ಶಾರ್ಪ್ ಶೂಟರ್ ಇಲ್ಲದೇ ನಿವೃತ್ತಿ ಹೊಂದಿದವರನ್ನ ಕರೆದುಕೊಂಡು ಹೋಗಿದ್ದಾರೆ. ಅನುಭವಿ ಕಾಡಾನೆಗಳು ಇದ್ದರೂ ಅದನ್ನ ಬಳಸಿಕೊಂಡಿಲ್ಲ. ಸರಿಯಾದ ಆಂಬುಲೆನ್ಸ್ ಇಟ್ಕೊಂಡಿಲ್ಲ ಅಂದ್ರೆ ಯಾವ ವ್ಯವಸ್ಥೆ ಇದು ಎಂದು ಕಿಡಿಕಾರಿದ್ದಾರೆ. ಸಾವನ್ನಪ್ಪಿರೋ ಕುಟುಂಬದ ಸದಸ್ಯರಿಗೆ ಸರ್ಕಾರಿ ಕೆಲಸವನ್ನ ಕೊಡಬೇಕು ಅಂತಾ ಒತ್ತಾಯ ಮಾಡ್ತೇವೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ