ಅಕ್ಕ-ತಂಗಿ ಮೇಲೆ ಕಾಡಾನೆ ದಾಳಿ

ಗುರುವಾರ, 22 ಜೂನ್ 2023 (14:05 IST)
ಜಮೀನಿಗೆ ತೆರಳುತ್ತಿದ್ದ ಅಕ್ಕ-ತಂಗಿಯರ ಮೇಲೆ ಕಾಡಾನೆ ದಾಳಿ ನಡೆಸಿ, ಅಕ್ಕ ಸ್ಥಳದಲ್ಲೇ ಮೃತ ಪಟ್ಟು, ತಂಗಿ ಗಂಭೀರ ಗಾಯಗೊಂಡ ಘಟನೆ ಕನಕಪುರ ತಾಲೂಕಿನ ಅಚ್ಚಲು ಗ್ರಾಮದ ಇಂದಿರಾನಗರದಲ್ಲಿ ನಡೆದಿದೆ. 50 ವರ್ಷದ ಜಯಮ್ಮ ಮೃತ ಮಹಿಳೆಯಾಗಿದ್ದು, 45 ವರ್ಷದ ವೆಂಕಲಕ್ಷ್ಮಮ್ಮ ಗಂಭೀರ ಗಾಯಗೊಂಡ ಮಹಿಳೆ ಎಂದು ತಿಳಿದು ಬಂದಿದೆ. ಜಮೀನಿನಲ್ಲಿ ಎಳ್ಳು ಕೊಯ್ಯಲು ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ಗಾಯಾಳು ವೆಂಕಟಲಕ್ಷ್ಮಮ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ