ಕೋಗಿಲೆ ಮನೆ ಮೇಲೆ ಕಾಡಾನೆ ದಾಳಿ: ಮುಂದೇನಾಯ್ತು ಗೊತ್ತಾ?

ಮಂಗಳವಾರ, 2 ಅಕ್ಟೋಬರ್ 2018 (18:39 IST)
ಕೆಲವು ದಿನ ಅಲ್ಲಲ್ಲಿ ದಾಳಿ ಮಾಡಿ ಹಲವು ಅವಘಡಗಳಿಗೆ ಕಾರಣವಾಗುತ್ತಿದ್ದ ಕಾಡಾನೆಗಳು ಇದೀಗ ಕೋಗಿಲೆ ಮನೆ ಮೇಲೆ ದಾಳಿ ನಡೆಸಿ ಹಾನಿ ಮಾಡಿದ ಘಟನೆ ನಡೆದಿದೆ.

ಕಾಡಾನೆ ದಾಳಿ ಮತ್ತೆ ಮರುಕಳಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಹೋಬಳಿಯಲ್ಲಿ ಘಟನೆ ನಡೆದಿದೆ.
ಹಲವು ಗ್ರಾಮಗಳು ಕಾಡಾನೆ ಕಾಟಕ್ಕೆ ಬೇಸತ್ತು ಹೋಗಿವೆ. ಬಣಕಲ್ ವ್ಯಾಪ್ತಿಯ ಕೋಗಿಲೆ ಗ್ರಾಮದಲ್ಲಿ ಮನೆ ಮೇಲೆ ದಾಳಿ ಮಾಡಿದ ಕಾಡಾನೆ ಮನೆಯನ್ನು ಧ್ವಂಸಗೊಳಿಸಿದೆ. ರಾತ್ರಿ ವೇಳೆ ದಾಳಿ ನಡೆಸುತ್ತಿರುವ ಕಾಡಾನೆ
ದಾಳಿಗೆ ಗ್ರಾಮದ ಸುರೇಶ್ ಹಾಗೂ ಹರೀಶ್ ರ ಮನೆಗಳು ತುತ್ತಾಗಿವೆ.

ಕೋಗಿಲೆ ಗ್ರಾಮದಲ್ಲಿ ಬಾಳೆ, ಪೇಪರ್, ಕಾಪಿ, ಬೈನೆ ಮರಗಳನ್ನು  ನಾಶಮಾಡಿದ ಕಾಡಾನೆ, ಮನೆಯ ಚಪ್ಪರವನ್ನು ಸಂಪೂರ್ಣ ಕಿತ್ತು ಹಾಕಿದ ಘಟನೆ ನಡೆದಿದೆ.

ಲಕ್ಷಾಂತರ ರೂ. ನಷ್ಟ ಮಾಡಿದ ಕಾಡಾನೆಯಿಂದ ಕೋಗಿಲೆ ಗ್ರಾಮದ ವಾಸಿ ರಂಜಿತ್ ರೋಸಿ ಹೋಗಿದ್ದಾರೆ.
ಪ್ರತಿದಿನವೂ ಗ್ರಾಮದಲ್ಲಿ ನಿರಂತರವಾಗಿ ಕಾಡಾನೆ ದಾಳಿ ನಡೆಯುತ್ತಿದೆ. ಅರಣ್ಯಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಇತ್ತಾ ಗಮನ ಹರಿಸುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ