ಅಕ್ರಮವಾಗಿ ಸಂಗ್ರಹ: ಪಡಿತರ ಧಾನ್ಯ ವಶ

ಭಾನುವಾರ, 30 ಸೆಪ್ಟಂಬರ್ 2018 (19:32 IST)
ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ರ ಜಂಟಿ  ದಾಳಿ ವೇಳೆ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಪಡಿತರ ಧಾನ್ಯ ಪತ್ತೆಯಾಗಿದೆ.

5 ಲಕ್ಷ  ರೂ. ಮೌಲ್ಯದ ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಧಾನ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೀದರ್ ಜಿಲ್ಲೆಯ ಚಿಟಗುಪ್ಪಾ ಪಟ್ಟಣದ ಎಪಿಎಂಸಿ ಗೋದಾಮಿನಲ್ಲಿ ಪತ್ತೆಯಾದ ಪಡಿತರ ಧಾನ್ಯ ಇದಾಗಿದೆ. 135 ಕ್ವಿಂಟಾಲ್  ಅಕ್ಕಿ, 105 ಕ್ವಿಂಟಾಲ್ ಗೋಧಿ, 4ಕ್ವಿಂಟಾಲ್  ಹಾಲಿನ ಪುಡಿ ಸೇರಿದಂತೆ ಇನ್ನಿತರ ಧಾನ್ಯಗಳನ್ನು ಪೊಲೀಸ್ ರು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹದೇವ ಆದೇಶ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ