ಬೆಂಗಳೂರಿನಲ್ಲಿ ಗುರು ರಾಯರ ದರ್ಶನ ಪಡೆದ ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್

Sampriya

ಬುಧವಾರ, 6 ನವೆಂಬರ್ 2024 (14:35 IST)
Photo Courtesy X
ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಾಕ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಅವರು ಜಯನಗರದ ನಂಜನಗೂಡು ಶ್ರೀಗುರು ರಾಘವೇಂದ್ರ ಸ್ವಾಮಿ ಮಠಕ್ಕೆ ಕುಟುಂಬ ಸಮೇತ ಭೇಟಿ ಕೊಟ್ಟಿದ್ದಾರೆ. ‌

ಸುಧಾ ನಾರಾಯಣಮೂರ್ತಿ ದಂಪತಿಯ  ಅಳಿಯ ರಿಷಿ ಸುನಾಕ್ ಮತ್ತು  ಅಕ್ಷತಾ ಮೂರ್ತಿ  ಅವರು ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ.ವಾದಿಂದ್ರಾಚಾರ್ಯ ಅವರು ರಾಯರ ಶೇಷ ವಸ್ತ್ರ, ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು.

ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಸಮಾಜಸೇವಕಿ ಸುಧಾ ಮೂರ್ತಿ ಅವರು ತಮ್ಮ ಮಗಳು ಮತ್ತು ಅಳಿಯನ ಜೊತೆ ಮಠಕ್ಕೆ ಆಗಮಿಸಿ ದೇವರಿಗೆ ವಿಶೇಷ ಆರತಿ ಪೂಜೆ ಸಲ್ಲಿಸಿದರು. ಈ ವರ್ಷದ ಆರಂಭದಲ್ಲಿ, ಅಕ್ಷತಾ ಮೂರ್ತಿ ತಮ್ಮ ಪುತ್ರಿಯರಾದ ಅನೌಷ್ಕಾ ಮತ್ತು ಕೃಷ್ಣ ಅವರೊಂದಿಗೆ ಬೆಂಗಳೂರಿಗೆ ಆಗಮಿಸಿ ಈ ಮಠಕ್ಕೆ ಭೇಟಿ ನೀಡಿದ್ದರು.

ರಿಷಿ ಸುನಕ್‌ ಅವರು ರಾಯರ ಮೇಲೆ ಅಪಾರ ಭಕ್ತಿ ಬೆಳೆದಿದೆ. ರಾಯರ ಹೆಸರಲ್ಲಿ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ಪ್ರತಿ ಗುರುವಾರ ಉಪವಾಸ ಮಾಡ್ತಾರೆ. ಅಲ್ಲದೇ, ಗುರು ರಾಯರಿಗೆ ಪೂಜೆಯನ್ನು ಸಹ ಸಲ್ಲಿಸುತ್ತಾರೆ ಎಂದು ಸ್ವತಃ ಸುಧಾ ಮೂರ್ತಿ ಅವರೇ ವಿವರಿಸಿದ್ದಾರೆ.

ಭಾರತ ಹಿಂದೂ ಧರ್ಮದ ಮೂಲದ ಬ್ರಿಟನ್ ಪ್ರಧಾನಿಯಾಗಿದ್ದ ರಿಷಿ ಸುನಕ್ ಅವರು ಕಳೆದ ವರ್ಷ, ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ತಮ್ಮ ಪತ್ನಿಯೊಂದಿಗೆ ದೆಹಲಿಯ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಪೂಜೆ ಮತ್ತು ಅಭಿಷೇಕವನ್ನು ಮಾಡಿಸಿ ದೇವಸ್ಥಾನದ ಅರ್ಚಕರು ಮತ್ತು ಸ್ವಾಮಿಗಳೊಂದಿಗೆ ಸಂವಾದ ನಡೆಸಿದ್ದರು.

ರಿಷಿ ಸುನಕ್ ಜನಿಸಿದ್ದು ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ. ಆದರೆ ಭಾರತ ಮೂಲದ ಮೊದಲ ಪ್ರಧಾನಿಯಾದಾಗ ಭಾರತೀಯರು ಅಪಾರ ಸಂತೋಷಪಟ್ಟಿದ್ದರು. ರಿಷಿ ಸುನಕ್ ಅವರು ತಮ್ಮ ಭಾರತೀಯ ಮೂಲ ಮತ್ತು ಇಲ್ಲಿನ ಧಾರ್ಮಿಕ ನಂಬಿಕೆಗಳ ಬಗ್ಗೆ ಮನಸಾರೆ ಹೊಗಳುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ