ಅತಿ ಹೆಚ್ಚು ಚೆಕ್‌ ಡ್ಯಾಂ ಗಳನ್ನು ನಿರ್ಮಿಸುವ ಗ್ರಾ.ಪಂ.ಗಳಿಗೆ ತಲಾ 1 ಕೋಟಿ ರೂ.ಬಹುಮಾನ- ಸಚಿವ ಡಿ.ಕೆ.ಶಿವಕುಮಾರ್‌

ಶುಕ್ರವಾರ, 25 ಜನವರಿ 2019 (11:13 IST)
ಬೆಂಗಳೂರು : ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿರುವ ಹಿನ್ನಲೆಯಲ್ಲಿ ಅಂತರ್ಜಲ ಅಭಿವೃದ್ಧಿ ಪಡಿಸುವ ಸಲುವಾಗಿ  ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರು 30 ಜಿಲ್ಲೆಗಳ 60 ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರದಿಂದ ಬಂಪರ್ ಬಹುಮಾನವನ್ನು ಘೋಷಿಸಿದ್ದಾರೆ.


ಸಭೆಯೊಂದರಲ್ಲಿ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್‌, ‘ನರೇಗಾ ಯೋಜನೆಯಡಿ ಪ್ರತಿ ಗ್ರಾ.ಪಂಗಳಿಗೆ ಐದಾರು ಕೋಟಿ ರು. ಅನುದಾನ ದೊರೆಯುತ್ತಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚು ಹೆಚ್ಚು ಚೆಕ್‌ ಡ್ಯಾಂಕ್‌ ಗಳನ್ನು ನಿರ್ಮಿಸುವ ಕೆಲಸವನ್ನು ಮಾಡಬೇಕು. ಈ ಬಾರಿ ಪ್ರತೀ ಜಿಲ್ಲೆಗಳಲ್ಲೂ ಅತಿ ಹೆಚ್ಚು ಚೆಕ್‌ ಡ್ಯಾಮ್‌ ಗಳನ್ನು ನಿರ್ಮಿಸುವ ಎರಡು ಗ್ರಾ.ಪಂ.ಗಳನ್ನು ಗುರುತಿಸಿ ತಲಾ ಒಂದು ಕೋಟಿ ರು. ಬಹುಮಾನ ನೀಡಲಾಗುವುದು. ಒಟ್ಟು 30 ಜಿಲ್ಲೆಗಳಲ್ಲಿ 60 ಗ್ರಾಮ ಪಂಚಾಯ್ತಿಗಳಿಗೆ ಒಟ್ಟು 60 ಕೋಟಿ ರು. ಬಹುಮಾನ ನೀಡಲಾಗುವುದು. ಈ ಹಣವನ್ನು ಗ್ರಾ.ಪಂ.ಗಳು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ’ ಎಂದು ಘೋಷಿಸಿದ್ದಾರೆ.


ಹಾಗೇ ಅಂತರ್ಜಲ ಮಟ್ಟದಿನೇ ದಿನೇ ಕುಸಿಯುತ್ತಿದೆ. ಮುಂದಿನ ದಿನಗಳಲ್ಲಿ ಮೂರನೇ ಮಹಾಯುದ್ಧ ನಡೆದರೆ ಅದು ನೀರು ಮತ್ತು ಅಧಿಕಾರಕ್ಕಾಗಿ ಎಂಬ ಆತಂಕವಿದೆ. ಹಾಗಾಗಿ ಅಂತರ್ಜಲ ಉತ್ತಮ ಪಡಿಸಲು ಗ್ರಾ.ಪಂಗಳು ಹೆಚ್ಚು ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ