ರಾಜ್ಯ ಪ್ರವಾಸಕ್ಕೆ ಸಿದ್ದವಾದ ಮಾಜಿ ಸಿಎಂ ಯಡಿಯೂರಪ್ಪ..!

ಗುರುವಾರ, 30 ಮಾರ್ಚ್ 2023 (21:40 IST)
ರಾಜ್ಯ ವಿಧಾನಸಭಾ ಚುನಾವಣೆಗೆ ಕೇಸರಿ ಪಡೆಯ ನಾಯಕರು ಸಕಲ ಸಿದ್ದತೆ ನಡೆಸ್ತಿದ್ದಾರೆ. ಒಂದು ಕಡೆ ಹೈಕಮಾಂಡ್ ನಾಯಕರ ಸಾಲು ಸಾಲು ಭೇಟಿ ನೀಡಿ ಒಂದು ಸುತ್ತಿನ ಪ್ರಚಾರವನ್ನ ಮುಗಿಸಿಕೊಂಡಿದ್ದಾರೆ. ಚುನಾವಣೆಗೆ ಮಹೂರ್ತ ಫಿಕ್ಸ್ ಆದ ನಂತ್ರ  ಕ್ಷೇತ್ರಗಳ ಪ್ರಚಾರಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ. ಚುನಾವಣೆ ಸಿದ್ದತೆಗಳ ಬಗ್ಗೆ ಇಂದು ಬಿಎಸ್ ವೈ ಮಾಹಿತಿ ನೀಡಿದ್ರು ಜೊತೆಗೆ ಪುತ್ರ ವಿಜಯೇಂದ್ರ ಸ್ಪರ್ದೆ ಎಲ್ಲಿಂದ ಮಾಡ್ತಾರೆ ಅನ್ನೋ ಮಾಹಿತಿಯನ್ನ ನೀಡಿದ್ರು.ರಾಜ್ಯ ಚುನಾವಣೆ ದಿನಾಂಕ ಘೋಷಣೆಯಾಗ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದುರುತ್ತಿವೆ.ಜೆಡಿಎಸ್ ಬಿಜೆಪಿ ಕಾಂಗ್ರೆಸ್ ನ ನಾಯಕರು ಅಧಿಕಾರದ ಗದ್ದುಗೆ ಹಿಡಿಬೇಕಂತಾ ತಂತ್ರ ರಣತಂತ್ರಗಳನ್ನ ಹೆಣೆಯುತ್ತಿದ್ದಾರೆ. ಅದ್ರಲ್ಲೂ ಕೇಸರಿ ಪಡೆಯ ನಾಯಕರು ಮತ್ತೊಮ್ಮೆ ಅಧಿಕಾರ ಹಿಡಿಯಬೇಕಂತ ರಾಜ್ಯ ಸಂಚಾರ ಹೆಚ್ಚು ಕಮ್ಮಿ ಮುಗಿಸಿದ್ದಾರೆ. ಇಗ ಮತ್ತೆ ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಂಸತ್ ಸದಸ್ಯರು ಕ್ಷೇತ್ರಗಳ ಪ್ರಚಾರ ಸೇರಿದಂತೆ ಗೆಲ್ಲೋದಕ್ಕೆ ಒಗ್ಗಟ್ಟಿನ ಮಂತ್ರ ಜಪ ಮಾಡೋದಕ್ಕೆ ಸಿದ್ದವಾಗಿದ್ದಾರೆ. ತಮ್ಮ ಮುಂದಿನ ಪ್ರಚಾರ ಕಾರ್ಯವೈಖರಿ ಬಗ್ಗೆ ಮಾತನಾಡಿದ ಮಾಜಿ ಸಿಎಂ ಬಿಎಸ್ ವೈ  ನಾನು, ನಮ್ಮ ಎಲ್ಲಾ ಸಂಸತ್ ಸದಸ್ಯರು ಪ್ರಚಾರ ಮಾಡ್ತೀವಿ.ಈ ಹಿಂದೆ  ಲೋಕಸಭೆಯಲ್ಲಿ 25 ಸೀಟು ಗೆಲ್ತೀವಿ ಅಂತ ಹೇಳಿದ್ದೆ,ಅದೇ ರೀತಿ 25 ಸೀಟು ಗೆದ್ದಿದ್ದೇವೆ. ವಿಜಯ ಸಂಕಲ್ಪ ಸಮಾವೇಶ ಯಶಸ್ವಿಯಾಗಿದೆ. ನರೇಂದ್ರ ಮೋದಿ ಮುಂದೆ ರಾಹುಲ್ ಗಾಂಧಿ ನಿಲ್ಲಲು ಸಾಧ್ಯವೇ, ಕಾಂಗ್ರೆಸ್ ನವರು ಅಧಿಕಾರಕ್ಕೆ ಬರ್ತಿವಿ ಅಂತಾ ಹಗಲುಗನಸು ಕಾಣ್ತಿದ್ದಾರೆ ಅವರು 40-50 ಸೀಟು ಗೆಲ್ಲಲ್ಲ. ಕಾಂಗ್ರೆಸ್ ಪಕ್ಷದವರು ಅವರ ನಾಯಕರು ಯಾರು ಅಂತ ಹೇಳಲಿ ಅಂತ ಬಿಎಸ್ ವೈ ಸವಾಲಾಕಿದ್ರು

ಇನ್ನೂ ಕೆಲ ಹಾಲಿ ಶಾಸಕರಿಗೆ ಟಿಕೆಟ್ ನೀಡದಂತೆ ಪ್ರತಿಭಟನೆ ನಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಬಿಎಸ್ ವೈ, ಯಾವ ಪಕ್ಷ ನೂರಕ್ಕೂ ನೂರರಷ್ಟು ಅಧಿಕಾರಕ್ಕೆ ಬರುತ್ತದೆಆ ಪಕ್ಷದಲ್ಲಿ ಈ ರೀತಿ ವಿರೋಧ ವ್ಯಕ್ತ ವಾಗೋದು ಸಹಜ . ಈಗಾಗಲೇ ಮೂರು ಸರ್ವೆ ಆಗಿದೆ ಆದಷ್ಟು ಬೇಗ ಹೈಕಮಾಂಡ್ ನಾಯಕರು ಅಭ್ಯರ್ಥಿ ಆಯ್ಕೆ ಮಾಡ್ತಾರೆ ಕೆಲ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿರುವ ವಿಚಾರ ಯಾರಿಗೆ ಟಿಕೆಟ್ ಸಿಗಲ್ವೋ ಅವರು ಕೂಡ ಅಭ್ಯರ್ಥಿ ಪರ ಕೆಲಸ ಮಾಡ್ತಾರೆ. ಕೆಲವು ಒಂದಿಬ್ಬರು ಟಿಕೆಟ್ ಸಿಗಲ್ಲ ಅಂತಾ ಬೇರೆ ಕಡೆ ಹೋಗಿರಬಹುದು ಆದರೆ ಹಿಂದೆ ಬಿಜೆಪಿಗೆ ಬಂದ ಯಾವ ಶಾಸಕರು ಕೂಡ ಕಾಂಗ್ರೆಸ್ ಗೆ ಹೋಗಲ್ಲ ಅವರು ಎಲ್ಲರಿಗೂ ಮೋದಿ ಮೇಲೆ ಬಹಳ ನಂಭಿಕೆ ವಿಶ್ವಾಸ ಇದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು .

ಈ ಬಾರಿಯ ಚುನಾವಣೆ ಹಲವು ನಾಯಕರ‌ ಭವಿಷ್ಯ ಬರೆಯಲಿದೆ ಅನ್ನೋದು ಮೇಲ್ನೋಟಕ್ಕೆ ತಿಳಿದುಬರ್ತಿದೆ. ಅಧಿಕಾರದ ಗದ್ದುಗೆ ಏರೋದಕ್ಕೆ ತೀವ್ರ ಪೈಪೋಟಿ ಎದುರಾಗೋದು ಗ್ಯಾರಂಟಿ. ಕುಟುಂಬ ರಾಜಕೀಯಕ್ಕೆ ಫುಲ್ ಸ್ಟಾಪ್ ಹಾಕಬೇಕೆಂಬ ಬಿಜೆಪಿ ಹೈಕಮಾಂಡ್ ನಾಯಕರ ತೀರ್ಮಾನಕ್ಕೆ ರಾಜ್ಯದ ನಾಯಕರಿಂದ ಯಾವ ರೀತಿ ರೆಸ್ಪಾನ್ಸ್ ಬರುತ್ತೆ, ಅದ್ರಲ್ಲೂ ಬಿಎಸ್ ವೈ ಪುತ್ರ ವಿಜಯೇಂದ್ರ, ಮಾಜಿ ಸಿಎಂ ಸಿದ್ದರಾಮಯ್ಯ ‌ವಿರುದ್ದ ವರುಣದಲ್ಲಿ‌ ಸ್ಪರ್ಧೆ ಮಾಡ್ತಾರಾ , ಮಾಜಿ ಸಿಎಂ ಸಿದ್ದು ಹೆಣೆಯಲು ಹೈಕಮಾಂಡ್ ರೂಪಿಸಿದ ರಣತಂತ್ರದಲ್ಲಿ ಯಾರು ಯಶಸ್ವಿಯಾಗ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ