ಕೈ’ ನಾಯಕನಿಗೆ ಮಾಜಿ ಕಾರ್ಪೊರೇಟರ್ ಧಮ್ಕಿ

ಗುರುವಾರ, 23 ಮಾರ್ಚ್ 2023 (19:34 IST)
ನಮ್ಮ ಹುಡುಗರಿಗೆ ತೊಂದ್ರೆ ಕೊಟ್ರೆ ಮನೆಗೆ ನುಗ್ಗಿ ಹೊಡಿತೀನಿ ಎಂದು ಬೆಂಗಳೂರಿನೌಲ್ಲಿ ಕಾಂಗ್ರೆಸ್​​ ನಾಯಕ ಸಂಭಾವ್ಯ ಅಭ್ಯರ್ಥಿಗೆ ಮಾಜಿ ಕಾರ್ಪೊರೇಟರ್ ಧಮ್ಕಿ ಹಾಕಿದ್ದಾರೆ.ಮಾಜಿ ಕಾರ್ಪೋರೇಟರ್, JDS ಮುಖಂಡ ಇಮ್ರಾನ್ ಪಾಷಾ ಕಾಂಗ್ರೆಸ್ ನಾಯಕ ನಾರಾಯಣಸ್ವಾಮಿಗೆ ಅವಾಜ್​ ಹಾಕಿದ್ದಾರೆ. ನೀನೆಷ್ಟೆ ಪ್ರಭಾವಿಯಾದ್ರೂ ಬಿಡಲ್ಲ.. ಮನೆಗೆ ನುಗ್ಗಿ ಹೊಡೀತಿನಿ ಎಂದು ಇಮ್ರಾನ್ ಪಾಷಾ ಆವಾಜ್​ ಹಾಕಿದ್ದಾರೆ. ಬೇರೆಯವರು ಮಾತನಾಡುವ ಸಂದರ್ಭದಲ್ಲಿ ಮೈಕ್ ಕಸಿದು ಆವಾಜ್​​ ಹಾಕಲಾಗಿದ್ದು, ಈ ವಿಡಿಯೋ ವಿಡಿಯೋ ಲಭ್ಯವಾಗಿದ್ದು, ಇಮ್ರಾನ್​ ಪಾಷಾ ಉರ್ದಿನಲ್ಲಿ ಆವಾಜ್​ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ