ನರಸಿಂಹರಾಜ ಕ್ಷೇತ್ರದ JDS ಅಭ್ಯರ್ಥಿ ಸಿಎಂ ಇಬ್ರಾಹಿಂ
ಹಳೆ ಮೈಸೂರು ಭಾಗದಲ್ಲಿ ಗೆಲ್ಲಲು JDS ಮಾಸ್ಟರ್ ಪ್ಲ್ಯಾನ್ ರೂಪಿಸಿದೆ.. ಹಳೆ ಮೈಸೂರು ಭಾಗದಲ್ಲಿ ಗೆಲ್ಲಲು BJP, JDS ತಂತ್ರ ಹೆಣೆಯುತ್ತಿದ್ದು, ಇದಕ್ಕೆ ಟಕ್ಕರ್ ಕೊಡಲು JDS ತಯಾರಿ ನಡೆಸಿದೆ.. ಹಳೆ ಮೈಸೂರು ವಶಮಾಡಿಕೊಳ್ಳಲು JDS ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಖಾಡಕ್ಕಿಳಿತಾರಾ ಎಂಬ ಚರ್ಚೆ ಜೋರಾಗಿದೆ.. ನರಸಿಂಹರಾಜ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಕಾಂಗ್ರೆಸ್ನ ತನ್ವೀರ್ ಸೇಠ್ ಹಾಲಿ ಶಾಸಕರಾಗಿದ್ದಾರೆ.. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಮಾಡಲು JDS ತಯಾರಿ ಮಾಡಿಕೊಳ್ತಿದೆ. JDSನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ C.M. ಇಬ್ರಾಹಿಂ ಸ್ಪರ್ಧೆ ಮಾಡುತ್ತಾರೆಂದು ಹೇಳಿದ್ದಾರೆ. ಸಿಎಂ ಇಬ್ರಾಹಿಂ ನರಸಿಂಹರಾಜ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಇಲ್ಲಿಂದ ಸಿಎಂ ಇಬ್ರಾಹಿಂ ಸ್ಪರ್ಧಿಸುತ್ತಾರೆ ಎಂಬ ಮಾತು ಜೋರಾಗ್ತಿದ್ದಂತೆ, ನರಸಿಂಹರಾಜ ಕ್ಷೇತ್ರದ JDS ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಾಗಿದೆ.. ಇಬ್ರಾಹಿಂ ಕಳೆದ 6 ತಿಂಗಳಿನಿಂದ ನರಸಿಂಹರಾಜ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಕ್ಷೇತ್ರ ಹದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರ ಮೇಲೆ ಮುನಿಸಿಕೊಂಡು ಇಬ್ರಾಹಿಂ ಕಾಂಗ್ರೆಸ್ ತೊರೆದಿದ್ದರು.. ಇದೀಗ ಸಿದ್ದರಾಮಯ್ಯ ತವರು ಜಿಲ್ಲೆಯಿಂದಲೇ ಸ್ಪರ್ಧೆ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ವಿರುದ್ಧ C.M. ಇಬ್ರಾಹಿಂ ತೊಡೆತಟ್ಟಿದ್ದಾರೆ.