ಹಾಲಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ ಮಾಜಿ ಶಿಕ್ಷಣ ಎಸ್ ಸುರೇಶ್ ಕುಮಾರ್

ಮಂಗಳವಾರ, 27 ಜೂನ್ 2023 (20:44 IST)
ಶಾಲಾ ಮಕ್ಕಳಿಗೆ ಬ್ಯಾಗ್ ಹೊರೆ ಕಡಿಮೆ ವಿಚಾರವಾಗಿ  ಮಾಜಿ ಶಿಕ್ಷಣ ಸಚಿವರಿಂದ ಹಾಲಿ ಶಿಕ್ಷಣ ಸಚಿವರಿಗೆ  ಮೆಚ್ಚುಗೆಯ ಪತ್ರ ಬರೆಯಲಾಗಿದೆ.ಪತ್ರ ಬರೆದು ಮೆಚ್ಚುಗೆಯನ್ನ ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.ಬ್ಯಾಗ್ ಹೊರೆ ಕಡಿತ ಜೊತೆ ಸಂಭ್ರಮದ ಶನಿವಾರ ಆಚರಣೆಗೂ ಮನವಿ ಮಾಡಿದ್ದಾರೆ.
 
ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಬ್ಯಾಗ್‌ ಹೊರೆ ಕಡಿಮೆ ಮಾಡುವ ದಿಕ್ಕಿನಲ್ಲಿ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ.ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ತೀರಾ ಅವಶ್ಯಕವಾಗಿರುವ ಕ್ರಮವಾಗಿದೆ.ಬ್ಯಾಗ್ ಹೊರೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಿದೆ.ಹೀಗಾಗಿ ಬ್ಯಾಗ್ ಹೊರೆ ಕಡಿಮೆ ಮಾಡಿರುವ ಈ ನಡೆ ಮಹತ್ವದಾಗಿದೆ .ಮೆಚ್ಚುಗೆಯ ಜೊತೆಗೆ ಪ್ರತಿ ಪಕ್ಷದ ನಾಯಕನಿಂದ ತನ್ನ ಈ ನೆನಪುಗಳ ಮೆಲುಕು ಹಾಕಲಾಗಿದೆ.ತಿಂಗಳಿಗೆ ಕನಿಷ್ಟ ಒಂದು ಶನಿವಾರವಾದರೂ ಮಕ್ಕಳಿಗೆ ಬ್ಯಾಗ್ ರಹಿತ ದಿನವನ್ನಾಗಿಸಬೇಕು.2019 ರಲ್ಲಿ ಈ ಕುರಿತಂತೆ ನಾನು ವಿಶೇಷ ಕಾಳಜಿವಹಿಸಿ ಶನಿವಾರದಂದು ಬ್ಯಾಗ್ ರಹಿತ ದಿನವನ್ನಾಗಿ ಆಚರಿಸಲು ಕ್ರಮವಹಿಸಿದ್ದೆ. ಈ ದಿನವನ್ನು "ಸಂಭ್ರಮದ ಶನಿವಾರ" ಎಂದು ಕರೆಯಬೇಕೆಂಬುದೂ ತೀರ್ಮಾನಿಸಲಾಗಿತ್ತು. ಈ ಯೋಜನೆ ರೂಪಿಸಿದಾಗ ರಾಜ್ಯಾದ್ಯಂತ ಶಾಲಾ ಮಕ್ಕಳಲ್ಲಿ ನಿಜಕ್ಕೂ ಸಂಭ್ರಮ ಮನೆ ಮಾಡಿತ್ತು.
 
ಪುಸ್ತಕದ ಬ್ಯಾಗನ್ನು ಮನೆಯಲ್ಲಿಯೇ ಬಿಟ್ಟು ತಿಂಗಳಿಗೆ ಒಂದು ಶನಿವಾರ ಆಗಮಿಸುತ್ತಿದ್ದ ಆ ಚಿಣ್ಣರ ಸಂಭ್ರಮವನ್ನು ಈಗಲೂ ನನ್ನ ಕಣ್ಣ ಮುಂದೆ  ಇದೆ.ಹಾಡು,ಆಟ,ಕಥೆ,ವಿವಿಧ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದು ನಮ್ಮ ಆ ಸಂಭ್ರಮದ ಶನಿವಾರದ ಮುಖ್ಯ ಉದ್ದೇಶವಾಗಿತ್ತು.ಕೋವಿಡ್ ಕಾಲಘಟ್ಟದ ಸವಾಲುಗಳು ಈ ಯೋಜನೆಗೆ  ವಿರಾಮ ಹಾಡಿದೆವು.ಸಂಭ್ರಮದ ಶನಿವಾರ ಯೋಜನೆಯನ್ನ ಮತ್ತೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಮಾತ್ರವೇ ಕಲಿಕೆಯ ಮೂಲವಾಗಬಾರದು. ಸುತ್ತಲಿನ ಪರಿಸರ, ಪೂರಕವಾದ ಚಟುವಟಿಕೆಗಳು ಮಕ್ಕಳಿಗೆ ಇನ್ನಷ್ಟು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸುತ್ತದೆ.ಮಕ್ಕಳಿಗೆ ಕಲಿಕೆಯೂ ಸಹನೀಯವಾಗುತ್ತದೆ. ದೇಶದ ಭವಿಷ್ಯಕ್ಕೂ ಒಳಿತಾಗುತ್ತದೆ.ಸಂಭ್ರಮದ ಶನಿವಾರದಂತಹ ಮಹತ್ವದ ಕಾರ್ಯಕ್ರಮಗಳ ಬಗ್ಗೆ ಗಮನಹರಿಸುವಂತೆ ಮನವಿಯನ್ನ ಮಾಜಿ ಶಿಕ್ಷಣ ಸಚಿವ, ಶಾಸಕರಾದ ಎಸ್.ಸುರೇಶ್ ಕುಮಾರ್ ರಿಂದ ಮನವಿ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ