ಒಂದೇ ವೇದಿಕೆಯಲ್ಲಿ ಡಿಕೆಶಿವಕುಮಾರ್ ಮತ್ತು ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ಪರಸ್ಪರ ಹಗ್ಗ ಜಗ್ಗಾಟದಲ್ಲಿರುವ ಉಭಯ ನಾಯಕರು ಭಾಗಿಯಾಗಿದ್ರು.ಬಹಿರಂಗವಾಗಿ ಡಿಕೆಶಿ ವಿರುದ್ದ ಅಶ್ವಥ್ ನಾರಯಣ್ ಹೇಳಿಕೆ ನೀಡುತ್ತಿದ್ರು.ಕೆಂಪೇಗೌಡ ದಿನಾಚರಣೆ ಕಾರ್ಯಕ್ರಮದಲ್ಲಿ ನಾಯಕರು ಮುಖಾಮುಖಿಯಾಗಿದ್ದು,ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಾಲಾನಂದಶ್ರೀಗಳು ಕೂಡ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಡಿಕೆ ಶಿವಕುಮಾರ್ ಅಶ್ವಥ್ ನಾರಯಣ್ ಅವ್ರಿಗೆ ಒಂದು ವಿಷಯ ಹೇಳೊಕೆ ಇಷ್ಟ ಪಡ್ತೀನಿ.ತಾವು ಇತಿಹಾಸ ಓದಬೇಕು.ನಾನು ರಾಜಾಜಿನಗರದಲ್ಲಿ 6 ನೇ ತರಗತಿಗೆ ಬಂದು ಎನ್ ಪಿ ಎಸ್ ನಲ್ಲಿ ಓದಿದವನು.ಬೆಂಗಳೂರಿಗೆ ನನಗೂ ನಂಟಿದೆ.ನೀವು ರಾಜಕೀಯದಲ್ಲಿ ಮಾತನಾಡಿದ್ದೀರಾ?ಆದ್ರೂ ನಿಮಗೆ ನನ್ನ ಇತಿಹಾಸ ಗೊತ್ತಿಲ್ಲ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.ಅಲ್ಲದೇ ನಾನು ಇಲ್ಲಿ ಹಲಸಿನ ಮರ ನೆಟ್ಟಿದ್ದೀನಿ.ಈಗ ಎಲ್ಲೂ ಬೆಳೆದು ನಿಂತಿದೆ ಎಂದು ಡಿಕೆಶಿ ಅಶ್ವಥ್ ನಾರಾಯಣ್ ಗೆ ಟಾಂಗ್ ನೀಡಿದ್ದಾರೆ.