ಬೆಂಗಳೂರು : ತೊಗರಿ ಬೆಳೆ ಪ್ರೋತ್ಸಾಹ ಧನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ತೊಗರಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮ್ಮಿಶ್ರ ಸರ್ಕಾರ ತೊಗರಿ ಬೆಳೆಗಾರರಿಗೆ 425 ರೂ. ಪ್ರೋತ್ಸಾಹ ಧನ ನೀಡಿತ್ತು. ಆದರೆ ರಾಜ್ಯ ಬಿಜೆಪಿ ಸರ್ಕಾರ 300ರೂ ಮಾತ್ರ ನೀಡಿದೆ. ಪ್ರೋತ್ಸಾಹ ಧನದಲ್ಲಿ 125 ರೂ ಕಡಿತ ಮಾಡಿದ ಹಿನ್ನಲೆಯಲ್ಲಿ ತೊಗರಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಇದರ ಜೊತೆಗೆ ತೊಗರಿ ಖರೀದಿಗೆ ಮಿತಿ ಹೇರಲಾಗಿದೆ.ಇದರಿಂದ ತೊಗರಿ ಬೆಳೆಗಾರರಿಗೆ ಸಮಸ್ಯೆಯಾದ ಕಾರಣದಿಂದ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಅವರು ಕಿಡಿಕಾರಿದ್ದಾರೆ.