ಯಂಗ್‌ ಅರ್ಥ್‌ ಚಾಂಪಿಯನ್ಸ್‌ ಸ್ಪರ್ಧೆಯಲ್ಲಿ ಆಯ್ಕೆಯಾದ ನಾಲ್ಕು ಬೆಂಗಳೂರು ವಿದ್ಯಾರ್ಥಿಗಳು

ಗುರುವಾರ, 5 ಜನವರಿ 2023 (16:51 IST)
p
ಸೋನಿ ಬಿಬಿಸಿ ಆರ್ಥ್‌ ವತಿಯಿಂದ ಸಮಾಜದ ಸಮಸ್ಯೆ ಬಗೆಹರಿಸಲು ಉತ್ತಮ ಐಡಿಯಾ ಆಹ್ವಾನಿಸುವ "ಯಂಗ್‌ ಅರ್ಥ್‌ ಚಾಂಪಿಯನ್ಸ್‌" ಸ್ಪರ್ಧೆಯ ಎರಡನೇ ಆವರ್ತಿಯಲ್ಲಿ ತಮ್ಮ ವಿಶೇಷ ಐಡಿಯಾಗಳ ಮೂಲಕ ೧೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅದರಲ್ಲಿ ನಾಲ್ಕು ಮಕ್ಕಳು ಬೆಂಗಳೂರಿನವರೇ ಆಗಿದ್ದಾರೆ.
 
ಸೋನಿ ಬಿಬಿಸಿ ಅರ್ಥ್‌ ಅವರು, ಸಮಾಜದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ನೀಡುವ ವಿಶೇಷ ಐಡಿಯಾಗಳನ್ನು ಶಾಲಾ ವಿದ್ಯಾರ್ಥಿಗಳಿಂದ ಆಹ್ವಾನಿಸುವ "ಯಂಗ್‌ ಅರ್ಥ್‌ ಚಾಂಪಿಯನ್ಸ್‌" ಎಂಬ ಸ್ಪರ್ದೆ ನಡೆಸುತ್ತದೆ. ಅದರ ಮೊದಲನೇ ಆವರ್ತಿ ಯಶಸ್ವಿಯಾಗಿತ್ತು. ಇದೀಗ ಎರಡನೇ ಆವರ್ತಿಯಲ್ಲಿ ನಡೆಸಿದ್ದು, ವಿಭಿನ್ನ ಐಡಿಯಾ ನೀಡಿದ್ದ ವಿದ್ಯಾರ್ಥಿಗಳ ಪೈಕಿ ಅಂತಿಮವಾಗಿ ೧೦ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಇದರಲ್ಲಿ ನಾಲ್ವರು ಬೆಂಗಳೂರಿಗರೇ ಆಗಿರುವುದು ವಿಶೇಷ. 
 
ತ್ಯಾಜ್ಯ ವಿಲೇವಾರಿ, ಆಹಾರ ತ್ಯಾಜ್ಯದ ಮರುಬಳಕೆ, ನೀರನ್ನು ಶುದ್ಧೀಕರಿಸುವ ಸುಲಭ ಹಾಗೂ ನೂತನ ವಿಧಾನ ಸೇರಿದಂತೆ ಹಲವು ರೀತಿಯ ಐಡಿಯಾಗಳು ಅತ್ಯುತ್ತಮ ಐಡಿಯಾಗಳಾಗಿ ಆಯ್ಕೆಯಾಗಿವೆ. 
ಕುಮಾರನ್‌ ಚಿಲ್ಡ್ರನ್ಸ್‌ ಹೋಮ್‌ನ  ಕ್ರಿಶ್‌ ಆನಂದ್‌, ಕ್ಲಾರೆನ್ಸ್‌ ಪಬ್ಲಿಕ್‌ ಸ್ಕೂಲ್‌ನ ದರ್ಶ್‌ ಪೃಥ್ವಿ, ಯೂರೋ ಸ್ಕೂಲ್‌ನ ಧ್ವನಿ ಅಭಾನಿ, ಫ್ರೀಡಂ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ಗಾರ್ಗಿ ಸಾಗರ್‌ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. 
ಖ್ಯಾತ ನಟ ಜಿಮ್‌ ಸರ್ಬ್‌ ಹಾಗೂ ಅಮೃತಾಂಶು ಶ್ರೀವಾಸ್ತವ್‌ ನೇತೃತ್ವದ ತಂಡವು ಯಂಗ್‌ ಅರ್ಥ್‌ ಚಾಂಪಿಯನ್ಸ್‌ ಸ್ಪರ್ಧೆಯ ತೀರ್ಪುದಾರರಾಗಿದ್ದರು. ಈ ಸ್ಪರ್ಧೆಗೆ ಸುಮಾರು ಸಾವಿರಕ್ಕೂ ಹೆಚ್ಚು ೫ ರಿಂದ ೯ನೇ ತರಗತಿ ಓದುವ ವಿದ್ಯಾರ್ಥಿಗಳು ತಮ್ಮ ವಿಶೇಷ ಐಡಿಯಾಗಳನ್ನು ಕಳುಹಿಸಿಕೊಟ್ಟಿದ್ದರು. ಅದರಲ್ಲಿ ಕೇವ ೧೦ ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ