ಫೋಕ್ಸೊ ಪ್ರಕರಣ : ಮುರುಘಾ ಶ್ರೀಗಳಿಗೆ ಸಿಗುತ್ತಾ ಜಾಮೀನು..?

ಗುರುವಾರ, 1 ಸೆಪ್ಟಂಬರ್ 2022 (10:41 IST)
ಬೆಂಗಳೂರು : ಮುರುಘಾ ಶ್ರೀಗಳ ವಿರುದ್ಧ ಫೋಕ್ಸೊ ಪ್ರಕರಣ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ.

ಈ ಸಂಬಂಧ ಎಸ್ಪಿಗೆ ನೋಟಿಸ್ ನೀಡಿದ್ದು ಮುಂದಿನ 7 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ. ಪ್ರಕರಣ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ ಎಂಬ ಬಗ್ಗೆ ವರದಿ ಕೇಳಲಾಗಿದೆ.

ಇತ್ತ ಮಠಕ್ಕೆ ಭದ್ರತೆ ಹೆಚ್ಚಳ ಮಾಡಲಾಗಿದ್ದು, ಇಂದು ವಿದ್ಯಾರ್ಥಿನಿಯರ ಸಿಆರ್ಪಿಸಿ 164 ಹೇಳಿಕೆ ತನಿಖಾಧಿಕಾರಿಗಳ ಕೈ ಸೇರಲಿದೆ.

ಮುರುಘಾ ಶರಣರಿಗೆ ಸಿಆರ್ಪಿಸಿ ಸೆಕ್ಷನ್ 41ಎ ಅಡಿ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ. ಆರೋಪಿ ಬಂಧನ ಅಗತ್ಯವಿಲ್ಲದ ಸಂದರ್ಭದಲ್ಲಿ ಪೊಲೀಸರ ಮುಂದೆ ಹಾಜರಾಗಲು ಈ ನೋಟಿಸ್ ಅನ್ನು ಜಾರಿ ಮಾಡಲಾಗುತ್ತದೆ.

ತನಿಖಾಧಿಕಾರಿಗಳು ಪರಿಶೀಲಿಸಿ ಬಳಿಕ ಶ್ರೀಗಳಿಗೆ ನೋಟಿಸ್ ನೀಡಬಹುದಾಗಿದೆ. ಅಲ್ಲದೇ ಇಂದು ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯೂ ಬರಲಿದೆ. ಇನ್ನು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಹಿಂದೂಸ್ತಾನ್ ಜನತಾ ಪಕ್ಷದಿಂದ ಒತ್ತಾಯ ಕೇಳಿ ಬಂದಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ