ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದ ದ್ವಿಚಕ್ರ, ತ್ರಿಚಕ್ರ ವಾಹನ ಕಳ್ಳರು!
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಜನ ಮೂರು ಕಳ್ಳರನ್ನು ನಂದಿನಿ ಲೇಔಟ್ ನ ಪೊಲೀಸರು ಬಂದಿಸಿ ಬರೊಬ್ಬರಿ 6. 88 ಲಕ್ಷ ರೂ ಮೌಲ್ಯದ 10 ದ್ವಿಚಕ್ರ ವಾಹನಗಳು ಮತ್ತು ಒಂದು ತ್ರಿಚಕ್ರ ವಾಹನಗಳ ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಟಾಣಾ ಪೊಲೀಸರಿಂದ ಪ್ರಕರಣ ದಾಖಲು ನಂದಿನಿ ಲೇಔಟ್ ಪೊಲೀಸ್ ಹಾಗೂ ಸಿಸಿಬಿ ಸಂಪೂರ್ಣ ಸಿಬ್ಬಂದಿಯವರು ಲಗ್ಗೆರೆ ಸರಹದ್ದಿನ ಕೃಷ್ಣ ಭವನ ಹೋಟೆಲ್ ಬಳಿ 3 ಜನ ಆಸಾಮಿಗಳು ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಾಗ ಅವರನ್ನು ತಡೆದು ತಪಾಸಣೆ ನಡೆಸಿದ್ದು ಯಾವುದೇ ರೀತಿಯ ದಾಖಲಾತಿ ಸಿಗದೇ ಖದೀಮರನ್ನು ವಾಹನ ಸಮೇತ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಯಿತ್ತಿದೆ.