ಮೂಡ ಅಕ್ರಮ ನಿವೇಶನ ಹಂಚಿಕೆ: ಇಬ್ಬರು ಹಾಲಿ, ಒಬ್ಬ ಮಾಜಿ ಶಾಸಕರಿಗೆ ಕೋರ್ಟ್ ಸಮನ್ಸ್!
ಶುಕ್ರವಾರ, 16 ಜುಲೈ 2021 (15:26 IST)
2009ರಲ್ಲಿ ಮೂಡದಲ್ಲಿ ನಡೆದಿದೆ ಎನ್ನಲಾದ ಮೂಡ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮಂಡ್ಯದ ಇಬ್ಬರು ಹಾಲಿ ಹಾಗೂ ಒಬ್ಬ ಮಾಜಿ ಶಾಸಕ ಸೇರಿದಂತೆ 24 ಮಂದಿಗೆ ನ್ಯಾಯಲಯ ಸಮನ್ಸ್ ಜಾರಿಗೊಳಿಸಿದೆ.
ಮಂಡ್ಯ ಶಾಸಕ ಎಂ ಶ್ರೀನಿವಾಸ್, ಮೇಲುಕೋಟೆ ಶಾಸಕ ಪುಟ್ಟರಾಜು, ಶ್ರೀರಂಗಪಟ್ಟಣ ಮಾಜಿಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿದಂತೆ 24 ಜನರಿಗೆ ಸಮನ್ಸ್ ಜಾರಿಗೊಳಿಸಲಾಗಿದ್ದು, ಜು.20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 107 ಅಕ್ರಮ ನಿವೇಶನ ಸಂಬಂಧ ಸಿಬಿಐ ದೋಷಾರೋಪಣೆ ಪಟ್ಟಿ ಸಲ್ಲಿಸಿತ್ತು. ಇದರ ಆಧಾರದ ಮೇಲೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.