ಕಳ್ಳರ ಕೈಚಳಕ; ಸರಣಿ ಕಳ್ಳತನ

ಶುಕ್ರವಾರ, 27 ಜುಲೈ 2018 (16:38 IST)
ರಾತ್ರೋರಾತ್ರಿ ಕಳ್ಳರು ಕೈಚಳಕ ತೋರಿದ ಪರಿಣಾಮ ಹಲವು ವ್ಯಾಪಾರಸ್ಥರು ಲಕ್ಷಾಂತರ ಮೌಲ್ಯದ ನಷ್ಟಕ್ಕೆ ಒಳಗಾಗಿದ್ದಾರೆ.
ಲಕ್ಷಾಂತರ ಮೌಲ್ಯದ ವಸ್ತುಗಳ ಕಳ್ಳತನವಾಗಿರುವ ಘಟನೆ ನಡೆದಿದೆ. ಕೈಚಳಕ ತೋರಿರುವ ಕಳ್ಳರ ತಂಡ ಮೆಡಿಕಲ್ಶಾಪ್, ಕ್ಲಿನಿಕ್, ಟೈಲರ್ ಶಾಪ್ ಗಳಲ್ಲಿ ಸರಣಿ ಕಳ್ಳತನ ಮಾಡಿ ಪೇರಿ ಕಿತ್ತಿದೆ.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ರಾತ್ರೋರಾತ್ರಿ ಸರಣಿ ಕಳ್ಳತನ ನಡೆದಿದೆ. ಶಾಪ್ ಗಳ ಶೆಟರ್, ಮೇಲ್ಚಾವಣಿ  ಮುರಿದು ಕಳ್ಳತನ ಮಾಡಲಾಗಿದೆ. ಶಾಪ್ ಗಳಲ್ಲಿದ್ದ ನಗದು, ವಸ್ತುಗಳನ್ನ  ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಬಣಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬಣಕಲ್ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ