BJP ಬಂದ್ರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ : ಶ್ರೀರಾಮುಲು
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರಿಗೆ ಇಲಾಖೆ ಅಡವಿಟ್ಟ ವಿಚಾರವಾಗಿ ಮಾತನಾಡಿದರು. ಇಲಾಖೆ ಆಸ್ತಿ ಅಡವಿಟ್ಟಿರುವುದು ನಿಜ. ಅಡವಿಟ್ಟ ಉದ್ದೇಶ ಸಿಬ್ಬಂದಿ ಭವಿಷ್ಯದ ನಿಧಿಗಾಗಿ. ಹೆಚ್ಚು ಬಡ್ಡಿ ಬರಿಸಬೇಕಾಗಿತ್ತು.
ಅದನ್ನು ತಪ್ಪಿಸಲು ಕಡಿಮೆ ಬಡ್ಡಿದರ ದೊರೆಯುವ ಹಿನ್ನಲೆ, ಅಡಮಾನ ಇಡಲಾಗಿದೆ. ವೈಯಕ್ತಿಕವಾಗಿ ಇಲ್ಲಿ ಬಳಕೆ ಮಾಡುವದು ಏನೂ ಇಲ್ಲ. ಎಲ್ಲವೂ ಭವಿಷ್ಯದ ನಿಧಿ ಸಲುವಾಗಿ ಕೊಟ್ಟಿದ್ದು.
ಸಾರಿಗೆ ಲಾಭದಾಯಕದ ಉದ್ದೇಶವಿಲ್ಲ, ಜನರ ಸೇವೆ ನೀಡುವ ಉದ್ದೇಶವಿದೆ. ಸಿದ್ಧರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸದಸ್ಯತ್ವಕ್ಕೆ ಗಿಫ್ಟ್ ನೀಡುವ ವಿಚಾರಕ್ಕೆ ವ್ಯಂಗ್ಯವಾಡಿದರು.