79th Independence day: ಮೋದಿಗೆ ವಿಶೇಷ ಗಿಫ್ಟ್ ಕೊಟ್ಟ ಪುಟಾಣಿಗಳು

Krishnaveni K

ಶುಕ್ರವಾರ, 15 ಆಗಸ್ಟ್ 2025 (09:40 IST)
ನವದೆಹಲಿ: 79 ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಇಂದು ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ ಅವರಿಗೆ ಮಕ್ಕಳಿಂದ ವಿಶೇಷ ಉಡುಗೊರೆಯೊಂದು ಸಿಕ್ಕಿದೆ.

ಪ್ರತೀ ಬಾರಿಯೂ ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಬಳಿಕ ಅಷ್ಟು ಹೊತ್ತು ಕೇಸರಿ, ಬಿಳಿ, ಹಸಿರು ವರ್ಣದ ಬಟ್ಟೆ ಧರಿಸಿ ಶಿಸ್ತಾಗಿ ಕೂತು ಧ್ವಜ ವಂದನೆ ಮಾಡುವ ಮಕ್ಕಳನ್ನು ತಪ್ಪದೇ ಭೇಟಿ ಮಾಡುತ್ತಾರೆ. ಈ ವರ್ಷವೂ ಮೋದಿ ಮಕ್ಕಳ ಬಳಿ ತೆರಳಿದ್ದಾರೆ.

ಮಕ್ಕಳು ಕುಳತಿದ್ದ ಸಾಲಿನ ಕಡೆಗೆ ತಾವಾಗಿಯೇ ಹೋಗಿ ಜೈ ಹಿಂದ್ ಎಂದು ಘೋಷಣೆ ಕೂಗಿಸಿದ್ದಾರೆ. ಬಳಿಕ ಮಕ್ಕಳ ಬಳಿ ತೆರಳಿ ಕೈ ಕುಲುಕಿ ಎಲ್ಲರನ್ನೂ ಮಾತನಾಡಿಸುತ್ತಾ ತೆರಳಿದ್ದಾರೆ. ಈ ವೇಳೆ ಕೆಲವರು ಮೋದಿಗೆ ಉಡುಗೊರೆಗಳನ್ನು ನೀಡಿದ್ದಾರೆ.

ಅದರಲ್ಲೂ ವಿಶೇಷವಾಗಿ ಒಬ್ಬ ಪುಟಾಣಿ ಮೋದಿಗೆ ತಮ್ಮ ತಾಯಿ ಕಾಲ ಬುಡದಲ್ಲಿ ಕೂತಿರುವಂತಹ ವಿಶೇಷ ವರ್ಣಚಿತ್ರವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸ್ವೀಕರಿಸಿದ ಮೋದಿ ತಮ್ಮ ಸಿಬ್ಬಂದಿಗಳಿಗೆ ನೀಡಿದ್ದು ಕಾರಿನಲ್ಲಿ ಇಡುವಂತೆ ಸೂಚಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ