ಇಂದಿನಿಂದ ಪ್ರತಿ ಮನೆಯಲ್ಲೂ ತಿರಂಗಾ ರಂಗು
ಇನ್ನೆರಡು ದಿನಗಳಲ್ಲಿ ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳು ತುಂಬುತ್ತವೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಗುತ್ತಿದ್ದು, ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಇದರ ಒಂದು ಭಾಗವಾಗಿ ಇಂದಿನಿಂದ ಆಗಸ್ಟ್ 15ರವರೆಗೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ರಾರಾಜಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರದ ಹರ್ ಘರ್ ತಿರಂಗಾ ಉಪಕ್ರಮದ ಭಾಗವಾಗಿ ಇಂದಿನಿಂದ ಆಗಸ್ಟ್ 15 ರವರೆಗೆ ಭಾರತೀಯರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮನವಿ ಮಾಡಿದ್ದರು. ಅದರಂತೆ ಇಂದಿನಿಂದ ಒಟ್ಟು ಮೂರು ದಿನಗಳ ಕಾಲ ಕೋಟ್ಯಾಂತರ ದೇಶವಾಸಿಗಳು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜನವನ್ನು ಹಾರಿಸಲಿದ್ದಾರೆ..ಭಾರತ ಸರ್ಕಾರದ ಹರ್ ಘರ್ ತಿರಂಗಾಕ್ಕಾಗಿ ಕೆಲಸ ಮಾಡುತ್ತಿರುವ ಕಂಪನಿ ಟ್ಯಾಗ್‌ಬಿನ್ ವೆಬ್ಸೈಟ್ ಅನ್ನು ಪ್ರಾರಂಭಿಸಿದೆ..ಈ ವೆಬ್ಸೈಟ್ ಮೂಲಕ ಧ್ವಜದೊಂದಿಗೆ ಸೆಲ್ಫಿ ತೆಗೆದು ಅಪ್ಲೋಡ್ ಮಾಡಬಹುದಾಗಿದೆ. ಈವರೆಗೆ ಲಕ್ಷಾಂತರ ಮಂದಿ ಧ್ವಜ ಹಾರಿಸಿ ಸ್ಥಳವನ್ನು ಪಿನ್ ಮಾಡಿದ್ದು, ಧ್ವಜದೊಂದಿಗೆ ಸೆಲ್ಫಿ ತೆಗೆದು ಫೋಟೋ ಅಪ್ ಲೋಡ್ ಮಾಡಿಕೊಂಡಿದ್ದಾರೆ. ಈ ವೆಬ್ಸೈಟ್ ಮೂಲಕ 5 ಕೋಟಿ ಪಿನ್‌ಗಳನ್ನು ತಲುಪುವ ಗುರಿ ಹೊಂದಲಾಗಿದೆ.