ಪ್ರವಾಹದಿಂದ ರಕ್ಷಿಸಿಕೊಳ್ಳಲು ಮನೆ ನಿರ್ಮಿಸಿದ ಜಪಾನ್!?

ಶುಕ್ರವಾರ, 1 ಜುಲೈ 2022 (12:48 IST)
ಟೋಕಿಯೊ : ಒಂದು ದೇಶ ಅಭಿವೃದ್ಧಿ ಹೊಂದಿರಲಿ, ಹೊಂದದಿರಲಿ, ಪ್ರವಾಹ ಮಾತ್ರ ಯಾವುದೇ ರಿಯಾಯಿತಿ ತೋರಿಸುವುದಿಲ್ಲ.
 
ಒಮ್ಮೆಲೆ ಅಬ್ಬರಿಸಿದರೆ ನೂರಾರು ಜೀವಗಳು ಬಲಿಯಾಗುತ್ತವೆ. ಸಾವಿರಾರು ಮನೆಗಳನ್ನು ಆಹುತಿ ಪಡೆಯುತ್ತದೆ. ವಿಶ್ವದಲ್ಲೇ ಅತಿಹೆಚ್ಚು ಬಾರಿ ಪ್ರವಾಹಕ್ಕೆ ತುತ್ತಾಗಿರುವ ದೇಶ ಜಪಾನ್ ಆಗಿದೆ.

ಜಪಾನ್ ಎಷ್ಟು ಬಾರಿ ಪ್ರವಾಹಕ್ಕೆ ತುತ್ತಾದರೂ ಮತ್ತೆ – ಮತ್ತೆ ಪುಟಿದು ನಿಲ್ಲುತ್ತದೆ. ಇದೀಗ ಪ್ರವಾಹದೊಂದಿಗೇ ಬದುಕಲು ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.

ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗು¬ವವರಿಗಾಗಿಯೇ ಜಪಾನಿನ ಇಚಿಜೋ ಕೊಮುಟೆನ್ ಹೌಸ್ ಡೆವಲಪರ್ ಕಂಪೆನಿ ತೇಲುವ ಮನೆಯನ್ನು ನಿರ್ಮಿಸಿದೆ.  ಹೌದು.. ಜಪಾನ್ ಕಂಪನಿ ಅಭಿವೃದ್ಧಿಪಡಿಸಿರುವ ಈ ಮನೆ ಪ್ರವಾಹ ಬಂದಾಗ ತೇಲಲು ಆರಂಭಿಸುತ್ತದೆ.

ನೀರಿನ ಮಟ್ಟ ಕರಗಿದಾಗ ಮತ್ತೆ ನೆಲಕ್ಕೆ ಬಂದು ನಿಲ್ಲುತ್ತದೆ. ಇದನ್ನು ಒಂದು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ಮೂಲಕವೂ ಕಂಪನಿ ತೋರಿಸಿದ್ದು, ಜನರನ್ನು ಅಚ್ಚರಿಗೊಳಿಸಿದೆ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ