ಹುತಾತ್ಮ ಯೋಧರಿಗೆ ಮಕ್ಕಳಿಂದ ನಮನ
ದೇಶಾದ್ಯಂತ ಉಗ್ರರ ಹೀನ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಇನ್ನೊಂದು ಕಡೆ ಉಗ್ರರ ನಡೆ ಸಮರ್ಥಿಸಿಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗಿ ಪೋಲಿಸರ ಅಥಿತಿಗಳಾಗುತ್ತಿರುವದು ಕಂಡು ಬರುತ್ತಿದೆ. ಈ ಎಲ್ಲದರ ನಡುವೆ ಹುತಾತ್ಮ ಯೋಧರಿಗೆ ಪುಟ್ಟ ಮಕ್ಕಳಿಂದ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿ ಕಂಡು ಬಂದಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ ಬುರುಡ ಗಲ್ಲಿಯ 1ನೇ ತರಗತಿಯಿಂದ 4 ನೇ ತರಗತಿಯ ಪುಟಾಣಿ ವಿದ್ಯಾರ್ಥಿಗಳು ಮೇನದ ಬತ್ತಿ ಹಿಡಿದು ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತ ಪರ ಘೋಷಣೆ ಕೂಗಿ ಸೈನಿಕರಿಗೆ ಬೆಂಬಲ ವ್ಯಕ್ತಪಡಿಸಿದ್ದು ವಿಶೇಷವಾಗಿ ಕಂಡು ಬಂದಿತು.
ನಮ್ಮ ದೇಶದ ಸೈನಿಕರ ಹತ್ಯೆಗೆ ಪ್ರತೀಕಾರ ಪಡೆಯಬೇಕು ಎಂದು ಒತ್ತಾಯಿಸಿದ ಮಕ್ಕಳು, ನಾವು ಸೈನ್ಯ ಸೇರಿ ದೇಶ ಸೇವೆ ಮಾಡುತ್ತೇವೆ. ಪ್ರಾಣ ತ್ಯಾಗಕ್ಕೂ ಸಿದ್ಧ. ನಮ್ಮ ಸೈನಿಕರೇ ನಮಗೆ ಸ್ಫೂರ್ತಿ ಎಂದರು.