ಸೆಡ್ಡುಹೊಡೆದ ಭಾರತೀಯ ಸೇನೆ ಮಾಡಿದ್ದೇನು?

ಸೋಮವಾರ, 18 ಫೆಬ್ರವರಿ 2019 (16:35 IST)
ಜಮ್ಮುಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪುರದಲ್ಲಿ ಸಿಆರ್ಪಿಎಫ್ ಯೋಧರ ಬಲಿಗೆ ಮಾಸ್ಟರ್ ಮೈಂಡ್ ರೂಪಿಸಿದ್ದವ ಭಾರತೀಯ ಯೋಧರ ಗುಂಡಿಗೆ ಬಲಿಯಾಗಿದ್ದಾನೆ.

ಜೈಷ್ ಮಹಮದ್ ಸಂಘಟನೆಯ ಉಗ್ರ ರಶೀದ್ ಘಾಜಿ ಹಾಗೂ ಜೆಇಎಂನ ಕಮಾಂಡರ್ ಕರಂ ಸೇನಾಪಡೆ ಗುಂಡೇಟಿಗೆ ಬಲಿಯಾಗಿದ್ದಾನೆ.   ಮೂಲಕ ಸಿಆರ್ಪಿಎಫ್ ಯೋಧರ ಬಲಿಗೆ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 44 ಮಂದಿ ಸಿಆರ್ಪಿಎಫ್ ಯೋಧರ ಮಾರಣಹೋಮವಾಗಿತ್ತು. ಹಿನ್ನೆಲೆಯಲ್ಲಿ ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾ ಪ್ರಕರಣದ ರೂವಾರಿ ಅಬ್ದುಲ್ ರಶೀದ್ ಘಾಜಿ, ಪಿಂಗ್ಲಾನ್ನಲ್ಲಿ ಅಡಗಿರುವ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸೇನಾಪಡೆ ಇಡೀ ಪ್ರದೇಶವನ್ನು ಸುತ್ತುವರೆಯಿತು. ವೇಳೆ ಭಯೋತ್ಪಾದಕರು ಮತ್ತು ಸೇನಾಪಡೆಗಳ ನಡುವೆ ಮುಂಜಾನೆಯಿಂದಲೇ ಭೀಕರ ಗುಂಡಿನ ಕಾಳಗ ನಡೆಯಿತು. ಗುಂಡಿನ ಕಾಳಗದಲ್ಲಿ ಮೇಜರ್ ಸೇರಿದಂತೆ, ನಾಲ್ವರು ಯೋಧರು ಹಾಗೂ ಓರ್ವ ನಾಗರೀಕ ಸಾವನ್ನಪ್ಪಿದ್ದರು.

10 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಉಗ್ರರು ಅಡಗಿದ್ದ ಕಟ್ಟಡವನ್ನೇ ಧ್ವಂಸಗೊಳಿಸಿತು. ಘಟನೆಯಲ್ಲಿ ಅಬ್ದುಲ್ ರಶೀದ್ ಘಾಜಿ ಹಾಗೂ ಕಮಾಂಡರ್ ಕರಂ ಹತರಾದರು.  



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ