ಕಾಲಕಾಲಕ್ಕೆ ಮಾನ್ಸೂನ್ ಸೀಸನ್‌ಗೆ ಮೀಟಿಂಗ್ ಮಾಡ್ತೇವೆ- ತುಷಾರ್ ಗಿರಿನಾಥ್

ಬುಧವಾರ, 14 ಜೂನ್ 2023 (15:54 IST)
ನಾವು ಕಾಲಕಾಲಕ್ಕೆ ಮಾನ್ಸೂನ್ ಸೀಸನ್‌ಗೆ ಮೀಟಿಂಗ್ ಮಾಡ್ತೇವೆ.ಇಂದೂ ಕೂಡ ಅದೇ ಮೀಟಿಂಗ್ ನಡೆಸಿದ್ದೇವೆ.ನಮ್ಮ ಲಿಸ್ಟ್‌ನಲ್ಲಿ ೧೯೮ ವಾರ್ಡ್‌ಗಳಿತ್ತು.೧೧೮ ವಾರ್ಡ್‌ಗಳಿಗೆ ಈಗಾಗಲೇ ಪರಿಹಾರ ಸಿಕ್ಕಿದೆ.ಅಂಡರ್‌ಪಾಸ್‌ಗಳಿಗೆ ವೆಬ್ ಕ್ಯಾಮೆರಾ, ಮೀಟರ್ ಗೇಜ್ ಹಾಕುತ್ತೇವೆ.೪೧ ಅಂಡರ್‌ಪಾಸ್‌ಗಳ ಪರಿಶೀಲನೆ ರಿಪೋರ್ಟ್ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ.ತ್ವರತಿವಾಗಿ ಉಳಿದ ಕಡೆಗಳಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ರು.
 
ಅಲ್ಲದೇ ಮಳೆ ವಿಚಾರವಾಗಿ ಎಸಿಎಸ್ ಯುಡಿಡಿಗೆ ಮನವಿ ಮಾಡಿದ್ದೇವೆ.ಫೈರ್ ಫೋರ್ಸ್, ಎಸ್‌ಡಿಆರ್‌ಎಂ ಸೇರಿದಂತೆ ಎಲ್ಲರ ಸಹಾಯ ಬೇಕು ಅಂತ ಕೋರಿದ್ದೇವೆ.ಇ‌ನ್ನೂ ಈ ವೇಳೆ ಶಾಂಘ್ರೀಲಾ ಹೋಟೆಲ್ ವಿಚಾರವಾಗಿ ನಾನು ಇದರ ಬಗ್ಗೆ ಮಾತನಾಡುವ ಹಾಗಿಲ್ಲ ಎಂದು ಪ್ರಶ್ನೆಗೆ ಉತ್ತರ ನೀಡದೇ ತುಷಾರ್ ಗಿರಿನಾಥ್ ಜಾರಿಕೊಂಡ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ