ಮೂರ್ನಾಲ್ಕು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಕ್ಕಳು ಶಾಲೆಗೆ

ಮಂಗಳವಾರ, 26 ಅಕ್ಟೋಬರ್ 2021 (19:47 IST)
ನಿನ್ನೆ ಸೋಮವಾರ ದಿಂದ 1 ರಿಂದ 5 ನೇ ತರಗತಿವರೆಗೆ ಶಾಲೆ ಆರಂಭವಾಗಿದೆ.ಮಕ್ಕಳಿಂದ ಹಾಗೂ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಲೆ ಪ್ರಾರಂಭದ ದಿನ ಮಕ್ಕಳು ಹಾಗೂ ಪೋಷಕರು ಎಂಜಾಯ್ ಮಾಡಿದ್ದಾರೆ.ಮೂರ್ನಾಲ್ಕು ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮಕ್ಕಳು ಆಗಮಿಸುವ ನಿರೀಕ್ಷೆಯಿದೆ ಎಂದರು.ಎಲ್‌ಕೆ‌ಜಿ, ಯುಕೆಜಿ ತರಗತಿ ಆರಂಭದ ಬಗ್ಗೆ ಸದ್ಯಕ್ಕೆ ಚಿಂತನೆಯಿಲ್ಲ. ರಾಜ್ಯದಲ್ಲಿ ಹೊಸ ವೈರಸ್‌ಗೂ ಹಾಗೂ ಹಿಂದಿನ ವೈರಸ್‌ಗೂ ವ್ಯತ್ಯಾಸವಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಶೀಘ್ರವೇ ಎಲ್ಲಾ ಹುದ್ದೆಗಳನ್ನ ಭರ್ತಿ ಮಾಡಿಕೊಳ್ಳಲಾಗುವುದು.
ಚಿತ್ರಕಲೆ ಶಿಕ್ಷಕರ ನೇಮಕಕ್ಕೂ ಈ ಸಾಲಿನಲ್ಲಿ ಚಾಲನೆ ನೀಡಲಾಗುವುದು.ಮ್ಯೂಚುವಲ್ ಟ್ರಾನ್ಸ್‌ಫರ್ ಎಷ್ಟು ಸಾಧ್ಯವೋ ಅಷ್ಟು ಮಾಡಲು ಸಿದ್ದರಿದ್ದೇವೆ ಎಂದರು.ಪೋಷಕರಿಲ್ಲದ ಮಕ್ಕಳನ್ನ ಶಾಲೆಗೆ ಕರೆತರಲು ಆರ್‌ಡಿಪಿಆರ್ ಮೂಲಕ ಸರ್ವೆ ಮಾಡಲಾಗುತ್ತಿದೆ.ಸಾಕಷ್ಟು ಮಕ್ಕಳನ್ನ ಶಾಲೆಗೆ ಕರೆತರಲು ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕೋವಿಡ್‌ನಿಂದ ಮೃತಪಟ್ಟ ಪೋಷಕರ ಮಕ್ಕಳು ಶಾಲೆ ಬಿಟ್ಟಿದ್ದು ಸಂಖ್ಯೆ ತೀರಾ ಕಡಿಮೆಯಿದೆ.ಗ್ರಾಮೀಣ ಭಾಗದಲ್ಲಿ ರಾಜ್ಯದಲ್ಲಿ 48 ಸಾವಿರ ಶಾಲೆಗಳ ಕ್ಯಾಟಗಿರಿ ಮಾಡಲಾಗಿದೆ.ದುಸ್ಥಿತಿಯಲ್ಲಿರುವ ಎಲ್ಲಾ ಶಾಲೆಗಳನ್ನ ನವೀಕರಣ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ