ಶುಲ್ಕ ನಿಗದಿಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಪೋಷಕರ ಪ್ರತಿಭಟನೆ
ಗುರುವಾರ, 28 ಜನವರಿ 2021 (12:33 IST)
ಬೆಂಗಳೂರು : ಖಾಸಗಿ ಶಾಲೆಗಳಿಗೆ ಶುಲ್ಕ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಪೋಷಕರು ಬೃಹತ್ ಹೋರಾಟ ನಡೆಸಲಿದ್ದಾರೆ.
ಜ.31ರಂದು ಪೋಷಕರ ಹೋರಾಟ ಫಿಕ್ಸ್ ಆಗಿದ್ದು, ಪೋಷಕರ ಸಂಘಗಳಿಂದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಸುರೇಶ್ ಕುಮಾರ್ ನಿರ್ಲಕ್ಷ್ಯ ಧೋರಣೆಗೆ ಖಂಡಿಸಿ ಪೋಷಕರು ರೋಡಿಗಿಳಿದು ಪ್ರತಿಭಟನೆ ನಡೆಸಲಿದ್ದಾರೆ. ಶುಲ್ಕ ನಿಗದಿಗೆ ಆಗ್ರಹಿಸಿ ಫೋಷಕರ ಪ್ರತಿಭಟನೆ ನಡೆಸಲಿದ್ದಾರೆ ಎನ್ನಲಾಗಿದೆ.