ಸಭಾಪತಿ ಸ್ಥಾನದ ವಿಚಾರ: ಸಿಎಂ ಭೇಟಿ ಮಾಡಿದ ಎಂಎಲ್ ಸಿ ಹೊರಟ್ಟಿ
ಬುಧವಾರ, 27 ಜನವರಿ 2021 (13:09 IST)
ಬೆಂಗಳೂರು : ಸಭಾಪತಿ ಸ್ಥಾನದ ವಿಚಾರವಾಗಿ ದೇವೇಗೌಡರ ಸೂಚನೆ ಮೇರೆಗೆ ಎಂಎಲ್ ಸಿ ಹೊರಟ್ಟಿ ಸಿಎಂ ಭೇಟಿ ಮಾಡಿದ್ದಾರೆ.
ಎಂಎಲ್ ಸಿ ಹೊರಟ್ಟಿ ಸಭಾಪತಿ ಸ್ಥಾನದ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿದ್ದಾರೆ. ಎಂಎಲ್ ಸಿಗಳ ಜತೆ ಸಭೆ ನಡೆಸುತ್ತೇನೆ. ಈ ಬಗ್ಗೆ ಚರ್ಚಿಸೋದಾಗಿ ಸಿಎಂ ಭರವಸೆ ನೀಡಿದ್ದಾರೆ. ಬಿಜೆಪಿ ವರಿಷ್ಠರ ಜತೆಯೂ ದೇವೇಗೌಡ ಚರ್ಚೆ ನಡೆಸಿದ್ದಾರೆ. ದೂರವಾಣಿ ಮೂಲಕ ಮೋದಿ, ನಡ್ಡಾ ಜತೆ ಚರ್ಚೆ ಮಾಡಿದ್ದಾರೆ. ಈ ಬಗ್ಗೆ ಎಲ್ಲರೂ ಚರ್ಚಿಸಿ ತೀರ್ಮಾನಿಸುತ್ತಾರೆ. ಉಪಸಭಾಪತಿ ಸ್ಥಾನಕ್ಕೆ ನಾವು ಸ್ಪರ್ಧೆ ಮಾಡಲ್ಲ. ಸಿಎಂ ಏನ್ ತೀರ್ಮಾನ ಮಾಡ್ತಾರೋ ನೋಡ್ಬೇಕು ಎಂದು ಸಿಎಂ ಭೇಟಿ ಬಳಿಕ ಎಂಎಲ್ ಸಿ ಹೊರಟ್ಟಿ ಹೇಳಿಕೆ ನೀಡಿದ್ದಾರೆ.