ರಂಜಾನ್ ಗೆ ಮುಸ್ಲಿಮ್ ನೌಕರರ ಕೆಲಸದ ಅವಧಿ ಕಡಿತ: ಮಹತ್ವದ ಸುದ್ದಿ ಕೊಟ್ಟ ಪರಮೇಶ್ವರ್

Krishnaveni K

ಶನಿವಾರ, 22 ಫೆಬ್ರವರಿ 2025 (09:55 IST)
ಬೆಂಗಳೂರು: ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸರ್ಕಾರೀ ನೌಕರರಿಗೆ ಕೆಲಸದ ಅವಧಿ ಕಡಿತದ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್ ಮಹತ್ವದ ಮಾಹಿತಿ ಕೊಟ್ಟಿದ್ದಾರೆ.

ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ನೌಕರರ ಅವಧಿಯನ್ನು ಒಂದು ಗಂಟೆ ಕಡಿತಗೊಳಿಸಿ ಎಂದು ಕಾಂಗ್ರೆಸ್ ನಾಯಕ ಹುಸೇನ್ ಸಿಎಂಗೆ ಪತ್ರ ಬರೆದು ಮನವಿ ಮಾಡಿದ್ದರು. ಈಗಾಗಲೇ ತೆಲಂಗಾಣದಲ್ಲಿ ಸರ್ಕಾರವೇ ಈ ನಿರ್ಧಾರಕ್ಕೆ ಬಂದಿದೆ. ಕರ್ನಾಟಕದಲ್ಲೂ ಈ ವಿನಾಯ್ತಿ ನೀಡಿ ಎಂದು ಮನವಿ ಮಾಡಿದ್ದರು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಜಿ ಪರಮೇಶ್ವರ್, ಮುಸ್ಲಿಂ ಸರ್ಕಾರೀ ನೌಕರರಿಗೆ ಕೆಲಸದ ಅವಧಿ ಕಡಿತಗೊಳಿಸಲು ಮನವಿ ಬಂದಿದೆ. ಆದರೆ ಅದರ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ, ಚರ್ಚೆಯೂ ಆಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಹೀಗಾಗಿ ಮುಸ್ಲಿಂ ನೌಕರರಿಗೆ ಕೆಲಸದ ಅವಧಿ ಕಡಿತವಾಗುವ ಸಾಧ್ಯತೆಯಿಲ್ಲ. ದಸರಾಗೆ, ಶಿವರಾತ್ರಿಗೆ ರಜೆ ಕೊಡುವ ಹಾಗೆ ನಮಗೂ ರಜೆ ಕೊಡಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಗೆ ಪತ್ರ ಮುಖೇನ ಮನವಿ ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ