ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಂಗೇನೂ ಗೊತ್ತಿಲ್ಲ ಎಂದ ಡಿಸಿಎಂ ಜಿ ಪರಮೇಶ್ವರ್
ಭಾನುವಾರ, 10 ಜೂನ್ 2018 (11:45 IST)
ಬೆಂಗಳೂರು: ಕೆಪಿಸಿಸಿಗೆ ನೂತನ ಅಧ್ಯಕ್ಷರ ಆಯ್ಕೆ ಕುರಿತಂತೆ ಕೆಲವು ನಾಯಕರು ದೆಹಲಿಯಲ್ಲಿ ಹೈಕಮಾಂಡ್ ಜತೆ ಮಾತುಕತೆ ನಡೆಸಿರುವ ವಿಚಾರ ತನಗೇನೂ ಗೊತ್ತಿಲ್ಲ ಎಂದು ಡಿಸಿಎಂ ಜಿ ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ದಿನೇಶ್ ಗುಂಡೂರಾವ್, ಕೃಷ್ಣಭೇರೇಗೌಡ ಮುಂತಾದದ ನಾಯಕರು ಹೈಕಮಾಂಡ್ ಜತೆ ದೆಹಲಿಯಲ್ಲಿ ಈ ಬಗ್ಗೆ ಚರ್ಚಿಸಿರುವುದು ನನಗೆ ಗೊತ್ತಿಲ್ಲ. ನನಗೆ ಅವರು ಈ ಬಗ್ಗೆ ಏನೂ ಹೇಳಿಲ್ಲ’ ಎಂದಿದ್ದಾರೆ.
ಇನ್ನೊಂದೆಡೆ ಸಚಿವ ಸ್ಥಾನಕ್ಕಾಗಿ ಪಕ್ಷದಲ್ಲಿರುವ ಭಿನ್ನಮತದ ಬಗ್ಗೆ ಪ್ರತಿಕ್ರಿಯಿಸಿದ ಅವರು ಸದ್ಯಕ್ಕೆ ಎಲ್ಲವೂ ಶಾಂತವಾಗಿದೆ ಎಂದಿದ್ದಾರೆ. ಆದರೆ ಇಂದೂ ಕೂಡಾ ಪರಮೇಶ್ವರ್ ಮನೆ ಮುಂದೆ ಶಾಸಕರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.