ಜಿ20 ಶೃಂಗಸಭೆ : ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ ನೋ ಫ್ಲೈಝೋನ್ ಜಾರಿ
ಶುಕ್ರವಾರ, 3 ಫೆಬ್ರವರಿ 2023 (11:38 IST)
ಬೆಂಗಳೂರು : ಫೆಬ್ರವರಿ 5 ರಿಂದ 7ರ ವರೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆ ಹಿನ್ನೆಲೆ ತಾಜ್ ವೆಸ್ಟ್ ಎಂಡ್ ಆವರಣದ ಮೇಲೆ ತಾತ್ಕಾಲಿಕ ನೋ ಫ್ಲೈಝೋನ್ ಜಾರಿ ಮಾಡಲಾಗಿದೆ.
ಈ ಬಾರಿ ಜಿ20 ರಾಷ್ಟ್ರಗಳ ಸಭೆಗಳು ಭಾರತದ ವಿವಿಧೆಡೆ ನಡೆಯಲಿದ್ದು, ಅದರಲ್ಲಿ ಒಂದು ಬೆಂಗಳೂರಿನಲ್ಲಿ ಆಗುತ್ತಿದೆ. ಫೆಬ್ರವರಿ 5 ರಿಂದ 7ರ ವರೆಗೆ ಜಿ20ಯ ಇಂಧನ ಪರಿವರ್ತನಾ ಕಾರ್ಯಕಾರಿ ಗುಂಪಿನ ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ.
ಸಭೆಗೆ ಹಲವು ದೇಶಗಳ ಗಣ್ಯರು, ವಿವಿಐಪಿಗಳು ಭಾಗವಹಿಸಲಿದ್ದಾರೆ. ಹೀಗಾಗಿ ಗಣ್ಯರು ಆಗಮಿಸಲಿರುವ ನಗರದ ತಾಜ್ ವೆಸ್ಟ್ ಎಂಡ್ನ ಸುತ್ತ ತಾತ್ಕಾಲಿಕ ನೋ ಫ್ಲೈಝೋನ್ ಜಾರಿ ಮಾಡಲಾಗಿದೆ.
ನೋ ಫ್ಲೈಝೋನ್ನೊಂದಿಗೆ ತಾಜ್ ವೆಸ್ಟ್ ಎಂಡ್ ಸುತ್ತ 144 ಸೆಕ್ಷನ್ ಸಹ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.