ಗಾಂಧೀಜಿ, ಅಂಬೇಡ್ಕರ್‌ನ್ನು ಬಿಟ್ಟಿಲ್ಲ, ಇನ್ನು ನಮ್ಮನ್ನು ಬಿಡ್ತಾರಾ

Sampriya

ಮಂಗಳವಾರ, 14 ಅಕ್ಟೋಬರ್ 2025 (15:59 IST)
ಬೆಂಗಳೂರು: ಈ ಹಿಂದೆಯೂ ವ್ಯವಸ್ಥೆ ವಿರುದ್ಧ ಮಾತನಾಡಿದಾಗ ಕರೆಗಳು ಬಂದಿದ್ದವು, ಈಗಲೂ ಅದೇ ಆಗುತ್ತಿದೆ. ಗಾಂಧೀಜಿ, ಅಂಬೇಡ್ಕರ್‌ಗೆ ಬಿಟ್ಟಿಲ್ಲ, ಇನ್ನು ಇವರು ನಮ್ಮನ್ನು ಬಿಡುತ್ತಾರಾ, ಇದಕ್ಕೆಲ್ಲ ಹೆದರುವುದೂ ಇಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

ಬೆದರಿಕೆ ಕರೆ ಸಂಬಂಧ ಪ್ರತಿಕ್ರಿಯಿಸಿದ ಅವರು ಇದೀಗ ಹಿಂದಿ, ಇಂಗ್ಲೀಷ್‌ನಲ್ಲಿ ಮಾತನಾಡುವವರಿಂದ ಬೆದರಿಕೆ  ಕರೆಗಳು ಬರುತ್ತಿದೆ.  ನೋ ಕಾಲರ್ ಐಡಿ, ಅಂತರಾಷ್ಟ್ರೀಯ ನಂಬರ್ ಇದೆ. 

ಅವರು ಕೆಟ್ಟ ಭಾಷೆಯಿಂದ ನಮಗೆ, ಕುಟುಂಬದವರ ಪರಿಸ್ಥಿತಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. 

ಇದೆಲ್ಲ ಸಹಜ, ಹಿಂದೆ ಎರಡ್ಮೂರು ಬಾರಿ ಈ ವಿಚಾರವಾಗಿ ದೂರು ಕೊಟ್ಟಿದ್ದೆ. ಬೊಮ್ಮಾಯಿ ಇದ್ರು, ತನಿಖೆ ಮಾಡಿಸಿದರು. ಆಗ ಇದು ಹೊರ ದೇಶದಿಂದ ಬರುತ್ತಿವೆ ಅಂದರು. ಈಗಲೂ ಅದೇ ನಡೆದಿದೆ ಎಂದರು. 

ಈ ಹಿಂದೆ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಬೆದರಿಕೆ ಕರೆ ಬಂದಿತ್ತು, ಈಗಲೂ ದೂರು ಇದೆ. ಎಫ್‌ಐಆರ್ ರಿಜಿಸ್ಟರ್ ಮಾಡಬಹುದು, ಆದರೆ ಕಂಡು ಹಿಡಿಯೋದು ಕಷ್ಟ.

ನಾವ್ಯಾಕೆ ಈ ಸಿದ್ಧಾಂತದಿಂದ ಹಿಂದೆ ಸರಿಯಲಿ? ಈ ತತ್ವದಿಂದ ಗಾಂಧೀಜಿ ಬಲಿ ತೆಗದುಕೊಂಡಿಲ್ವಾ? ಸಂವಿಧಾನದಲ್ಲಿ ನಮಗೆ ನಂಬಿಕೆ ಇದೆ. ಇದು ನನ್ನ ಸಿದ್ಧಾಂತ, ನಾನು ಮಾತನಾಡಿದ್ದೇನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ