ದೇಶದಾದ್ಯಂತ ಇಂದು ಗಣೇಶ ಹಬ್ಬದ ಸಂಭ್ರಮ

ಗುರುವಾರ, 13 ಸೆಪ್ಟಂಬರ್ 2018 (08:45 IST)
ಬೆಂಗಳೂರು : ದೇಶದಾದ್ಯಂತ ಗಣೇಶ ಹಬ್ಬವನ್ನು ಇಂದು ಸಂಭ್ರದಿಂದ ಆಚರಿಸಲಾಗುತ್ತಿದ್ದು, ಎಲ್ಲಾ ಕಡೆ ಈಗಾಗಲೇ ಗಣೇಶನ ಮಣ‍್ಣಿನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ  ಪೂಜೆ ಪುನಸ್ಕಾರಗಳನ್ನು ಮಾಡಿ ಸಂಭ್ರಮಸುತ್ತಿದ್ದಾರೆ.


ಇಂದು ಗಣೇಶ ಚತುರ್ಥಿಯ ಹಿನ್ನಲೆಯಲ್ಲಿ ಬೆಂಗಳೂರು ನಗರದ ಕೆ.ಆರ್. ಮಾರ್ಕೆಟ್, ಯಶವಂತಪುರ ಮಾರ್ಕೆಟ್ ಸೇರಿದಂತೆ ನಗರದ ಎಲ್ಲಾ ಕಡೆ ಗಣೇಶ ಮೂರ್ತಿಗಳು ಹಾಗೂ ಹೂ ಹಣ್ಣಿನ ಖರೀದಿಯ ಭರಾಟೆ ತಡರಾತ್ರಿಯವರೆಗೂ ನಡೆಯಿತು.


ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ದೆಹಲಿಗಳಲ್ಲಿ ಬೃಹದಾಕಾರದ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಜನರು ಗಣೇಶನ ಮೂರ್ತಿಯನ್ನು ಹೊತ್ತು ಮೆರವಣೆಗೆ ಮೂಲಕ ಸಾಗುತ್ತಿದ್ದ ಕಾರಣ ನಗರದ ಹಲವು ಕಡೆ ವಾಹನ ದಟ್ಟಣೆಯಿಂದಾಗಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಜನರು ಪರದಾಡುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ