ಹಿಂದೂ – ಮುಸ್ಲಿಂ ಸೌಹಾರ್ದತೆಯ ಗಣೇಶ ಉತ್ಸವ

ಮಂಗಳವಾರ, 18 ಸೆಪ್ಟಂಬರ್ 2018 (16:31 IST)
ಆ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ಹಿಂದೂ ಮುಸ್ಲಿಮರು ಸಹೋದರತೆಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ.  

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಸಹೋದರತೆಯಿಂದ ಗಣೇಶೋತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ. 

ಕಳೆದ 25 ವರ್ಷಗಳಿಂದ ಪಟ್ಟಣದ ಬಸ್ ಸ್ಟ್ಯಾಂಡ್ ಗಜಾನನ ಮಿತ್ರಮಂಡಳಿಯ ಸದಸ್ಯರು 1993 ರಲ್ಲಿ ಮ್ಯಾಕ್ಸಿಕ್ಯಾಬ್ ವಾಹನ ಮಾಲಕರು ಹಾಗೂ ಚಾಲಕರ ಸಂಘದ ವತಿಯಿಂದ ಪ್ರಥಮ ಬಾರಿಗೆ ಪ್ರತಿಷ್ಠಾಪನೆ ಮಾಡಿದರು. ಅಂದಿನಿಂದ ಪ್ರತಿವರ್ಷವೂ  ಶ್ರದ್ದೆ ಭಕ್ತಿಯಿಂದ ಸಾವಳಗಿ ಪಟ್ಟಣದ ಎಲ್ಲ ಸಮುದಾಯಗಳ ಯುವಕರು, ದೊಡ್ಡವರು, ಚಿಕ್ಕವರೆನ್ನದೇ ಎಲ್ಲರೂ ಕೂಡಿಕೊಂಡು ವಿಜ್ರಂಭಣೆಯಿಂದ ಉತ್ಸವ ಆಚರಣೆ ಮಾಡುತ್ತಿದ್ದಾರೆ.

ಭವ್ಯ ಮೆರವಣಿಗೆಯೊಂದಿಗೆ ಗಣೇಶನ ವಿಗ್ರಹವನ್ನು ತಂದು ಪ್ರತಿಷ್ಠಾಪಿಸಿ, ಪ್ರತಿದಿನ ಎರಡು ಹೊತ್ತು ಪೂಜೆ ಸಲ್ಲಿಸಿ, ಐದನೇಯ ದಿನ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಹಮ್ಮಿಕೊಂಡು, ನಂತರ ಅನ್ನಪ್ರಸಾದ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ