ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಬೇಕಾದರೆ ಈ ರೂಲ್ಸ್ ಫಾಲೋ ಮಾಡ್ಲೇಬೇಕು!
ಗುರುವಾರ, 20 ಆಗಸ್ಟ್ 2020 (10:33 IST)
ಬೆಂಗಳೂರು: ಈ ಬಾರಿ ಕೊರೋನಾ ನಡುವೆಯೂ ಗಣೇಶ ಹಬ್ಬ ಆಚರಿಸಲು ಜನ ಸಜ್ಜಾಗುತ್ತಿದ್ದಾರೆ. ಹಾಗಿದ್ದರೂ ಲಾಕ್ ಡೌನ್ ಸಂಪೂರ್ಣ ತೆರವಾಗದ ಹಿನ್ನಲೆಯಲ್ಲಿ ಗಣೇಶೋತ್ಸವ ಆಚರಿಸಲು ಒಪ್ಪಿಗೆ ಸಿಗಬಹುದೇ ಎಂದು ಅನುಮಾನಗಳು ಜನರಲ್ಲಿವೆ.
ಪ್ರತೀ ಬಾರಿಯಂತೆ ಈ ಬಾರಿ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗದು. ಹಾಗಿದ್ದರೂ ಸರ್ಕಾರ ನೀಡಿರುವ ಕೆಲವು ಸಲಹೆ ಸೂಚನೆ ಪಾಲಿಸಿದರೆ ನಿಮ್ಮ ಗಲ್ಲಿಯಲ್ಲಿ ಗಣೇಶೋತ್ಸವ ಆಚರಿಸುವುದಕ್ಕೆ ಅಡ್ಡಿಯಿರದು.
ಈ ಬಾರಿ ಹಬ್ಬಕ್ಕೆ ಗಲ್ಲಿ ಗಲ್ಲಿಗಳಲ್ಲಿ ಗಣೇಶನ ಮೂರ್ತಿ ಕೂರಿಸಲು ಆಯಾ ಸ್ಥಳೀಯಾಡಳಿತದ ಒಪ್ಪಿಗೆ ಬೇಕು. ಆದಷ್ಟು ಒಂದು ವಾರ್ಡ್ ಗೆ ಒಂದೇ ಗಣೇಶನ ಮೂರ್ತಿ ಇಟ್ಟರೆ ಉತ್ತಮ.
ಗಣೇಶನ ಮೂರ್ತಿ ಇಟ್ಟಿದ್ದೇವೆಂದು ಸಿಕ್ಕಾಪಟ್ಟೆ ಸೌಂಡ್ ಮಾಡಿ ಮ್ಯೂಸಿಕ್ ಹಾಕೋದು, ಜನ ಸೇರಿ ಕುಣಿಯೋದು ಮಾಡೋ ಹಾಗಿಲ್ಲ.
ಅವರವರ ಮನೆಗಳಲ್ಲೇ ಗಣೇಶನ ಮೂರ್ತಿ ಕೂರಿಸಲು ಅಡ್ಡಿಯಿಲ್ಲ. ಆದರೆ ಹೊರಗೆ ವಿಸರ್ಜನೆ ಮಾಡಲು ಮೆರವಣಿಗೆ ಮೂಲಕ ತಾರದೇ ಮನೆಯೊಳಗೇ ವಿಸರ್ಜನೆ ಮಾಡಬೇಕು.
ಸಿಂಪಲ್ ಆಗಿ ಮನೆಯೊಳಗೇ ಗಣೇಶನ ಹಬ್ಬ ಮಾಡಲು ಯಾವುದೇ ನಿಬಂಧನೆ ಇಲ್ಲ.