ಗೌರಿ ಲಂಕೇಶ್ ಹತ್ಯೆ: ಎಸ್‌ಐಟಿಯಿಂದ ಡಿಕೆಶಿ ಆಪ್ತ ಜ್ಯೋತಿಷಿ ದ್ವಾರಕನಾಥ್ ವಿಚಾರಣೆ
ಬುಧವಾರ, 20 ಸೆಪ್ಟಂಬರ್ 2017 (20:31 IST)
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಜ್ಯೋತಿಷಿ ದ್ವಾರಕನಾಥ್ ಅವರನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿತು.
ದ್ವಾರಕನಾಥ್ ಮನೆಗೆ ಎಸ್‌ಐಟಿ ಅಧಿಕಾರಿಗಳು ತೆರಳಿ ವಿಚಾರಣೆ ನಡೆಸಿದರು. ದ್ವಾರಕನಾಥ್ ವಿರುದ್ಧ ಗೌರಿ ಲಂಕೇಶ್ ಹಲವು ಲೇಖನಗಳನ್ನು ಬರೆದಿದ್ದರು. ಗೌರಿ ಲಂಕೇಶ್ ವಿರುದ್ಧ ದ್ವಾರಕನಾಥ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಐಟಿ ಮಾಹಿತಿ ಕಲೆಹಾಕಿದೆ.
ಗೌರಿ ಹತ್ಯೆಗೂ ತನಗೂ ಯಾವುದೇ ಸಂಬಂಧ ಇಲ್ಲ. ಅವರೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ ಎಂದು ಜ್ಯೋತಿಷಿ ದ್ವಾರಕನಾಥ್ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.