“ನಮ್ಮ ಸಿಬ್ಬಂದಿಯಲ್ಲಿ ಒಬ್ಬರಾದ ಸಜೀವ್ ಕುಮಾರ್.ವಿ, ಪುರುಷ ಶಿಕ್ಷಕರನ್ನು ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ಬಿಡುವ ಬಗ್ಗೆ ಸಲಹೆ ನೀಡಿದರು. ಇವರು ಪಾಲಕ್ಕಾಡ್ ಮೂಲದ ಸಾಮಾಜಿಕ ಕಾರ್ಯಕರ್ತರಾದ ಬೋಬನ್ ಮಟ್ಟುಮಂತ ಅವರು ಸರ್ಕಾರಿ ಅಧಿಕಾರಿಗಳನ್ನು ಸರ್ ಎಂದು ಸಂಬೋಧಿಸುವ ಅಭ್ಯಾಸವನ್ನು ತೊಡೆದುಹಾಕಲು ಪ್ರಾರಂಭಿಸಿದ ಅಭಿಯಾನದಿಂದ ಅವರು ಸ್ಫೂರ್ತಿ ಪಡೆದಿದ್ದಾರೆ” ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ವೇಣುಗೋಪಾಲನ್ ಹೆಚ್ ಹೇಳಿದ್ದಾರೆ.
ಅಲ್ಲದೆ, ಶಾಲೆಯಿಂದ ಅನತಿ ದೂರದಲ್ಲಿರುವ ಪಂಚಾಯಿತಿಯಲ್ಲಿಯೂ ಇದೇ ರೀತಿಯ ಬದಲಾವಣೆಗಳನ್ನು ತರಲಾಗುತ್ತಿದೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ. ಶಾಲೆಯಿಂದ 14 ಕಿ.ಮೀ ದೂರದಲ್ಲಿರುವ ಮತ್ತೂರು ಪಂಚಾಯತ್‌ನಲ್ಲಿ ಕಳೆದ ವರ್ಷ ಜುಲೈನಲ್ಲಿ “ಸರ್” ಮತ್ತು “ಮೇಡಂ” ಎಂದು ಕರೆಯುವ ಪದ್ಧತಿಯನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಂಡಿದೆ. ಪಂಚಾಯಿತಿ ಸಿಬ್ಬಂದಿಯನ್ನು ಅವರ ಹುದ್ದೆಯ ಹೆಸರಿನಿಂದ ಕರೆಯುವಂತೆ ಮಂಡಳಿ ಸಾರ್ವಜನಿಕರಿಗೆ ಸೂಚಿಸಿದೆ.
'”ಸರ್' ಮತ್ತು 'ಮೇಡಂ' ಪದಗಳು ಲಿಂಗ ಸಮಾನತೆಗೆ ವಿರುದ್ಧವಾಗಿವೆ. ಶಿಕ್ಷಕರನ್ನು ಅವರ ಹೆಸರಿನಿಂದ ಕರೆಯಬೇಕು, ಅವರ ಲಿಂಗದ ಆಧಾರದಿಂದ ಅಲ್ಲ. ಶಿಕ್ಷಕರನ್ನು ಸಂಬೋಧಿಸುವ ಹೊಸ ಲಿಂಗ ನ್ಯಾಯದ ಬಗ್ಗೆ ಅರಿವು ಮೂಡಿಸಲು ಸಹಾಯ ಮಾಡುತ್ತದೆ. 'ಸರ್' ಎಂಬ ಸಂಬೋಧನೆ ವಸಾಹತುಶಾಹಿ ಕಾಲದ ಕುರುಹಾಗಿದ್ದರೆ, ಅದನ್ನು ತೊಲಗಿಸಬೇಕು'' ಎಂದು ಮುಖ್ಯೋಪಾಧ್ಯಾಯರು ಸೂಚಿಸಿದರು.