ಮದುವೆಗೆ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಬೆಂಗಳೂರಿನ ಮೈಸೂರು ರಸ್ತೆಯ ದೀಪಾಂಜಲಿನಗರದಲ್ಲಿ ನಡೆದಿದೆ. ಹತ್ಯೆಯಾದ ಯುವತಿಯನ್ನ ಶೋಭಾ ಎಂದು ಗುರ್ತಿಸಲಾಗಿದೆ.
2 ಮಕ್ಕಳ ತಂದೆಯಾಗಿದ್ದರೂ ಗಿರೀಶ್ ಶೋಭಾ ಮೇಲೆ ಮೋಹ ಬೆಳೆಸಿಕೊಂಡಿದ್ದ. ಅಪ್ಪ-ಅಮ್ಮ ಯಾರೂ ಇಲ್ಲ ಎಂಬುದನ್ನೇ ಅವಕಾಶವಾಗಿ ತೆಗೆದುಕೊಂಡಿದ್ದ ಗಿರೀಶ್ ಇನ್ನಿಲ್ಲದಂತೆ ಪೀಡಿಸಿದ್ದ. ಪಾಪ ಅನಾಥ ಯುವತಿಯನ್ನ ಇವತ್ತು ಚಾಕುವಿನಿಂದ ಇರಿದು ಕೊಂದೇ ಬಿಟ್ಟಿದ್ದಾನೆ. ತಲೆಮರೆಸಿಕೊಂಡಿರುವ ಕೊಲೆಗಡುಕ ಗಿರೀಶ್`ಗಾಗಿ ಬ್ಯಾಟರಾಯನಪುರ ಪೊಲೀಸರು ಹುಡುಕಾಟ ನಡೆಸಿದ್ದಾರೆ.