ಬೀದರ್: ಅಸ್ತಿತ್ವದಲ್ಲಿಯೇ ಇಲ್ಲದ ವಿವಿಯ ನಕಲಿ ಪದವಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ ನಾಲ್ವರು ಅಧಿಕಾರಿಗಳನ್ನು ರಾಜ್ಯ ಸಾಂಖ್ಯಿಕ ನಿರ್ದೇಶನಾಲಯ ವಜಾಗೊಳಿಸಿದೆ.
ಬೀದರ್ ಜಿಲ್ಲೆಯ ಆರೋಗ್ಯ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿ ರಾಜ್ಕುಮಾರ್, ಔರಾದ್ ತಾಲೂಕು ಕಚೇರಿಯ ಸಾಂಖ್ಯಿಕ ನೀರಿಕ್ಷಕ ಅಬ್ದುಲ್ ರಬ್, ಹಾಗೂ ಭಾಲ್ಕಿ ತಾಲೂಕು ಕಚೇರಿಯ ಬಾಲಾಜಿ ಬಿರಾದಾರ ಹುದ್ದೆಯಿಂದ ವಜಾಗೊಂಡಿದ್ದಾರೆ.