ಮಹದಾಯಿ ನದಿನೀರು ಹಂಚಿಕೆ ಬಗ್ಗೆ ಗೋವಾ ಡೆಪ್ಯುಟಿ ಸ್ಪೀಕರ್ ಹೇಳಿದ್ದೇನು ಗೊತ್ತಾ…?

ಮಂಗಳವಾರ, 30 ಜನವರಿ 2018 (10:31 IST)
ಗೋವಾ : ಮಹದಾಯಿ ನದಿನೀರು ಹಂಚಿಕೆ ಬಗ್ಗೆ ಗೋವಾ ಅಸೆಂಬ್ಲಿಯಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ ತೆಗೆದುಕೊಳಲು ನಿರ್ಧಾರ ಮಾಡಿರುವುದಾಗಿ ಗೋವಾ ಡೆಪ್ಯುಟಿ ಸ್ಪೀಕರ್ ಮೈಕಲ್ ಲೋಬೋ ಅವರು ಹೇಳಿಕೆಗಳನ್ನು ನೀಡಿದ್ದಾರೆ.

 
‘ಕರ್ನಾಟಕ ಕಣಕುಂಬಿಯಲ್ಲಿ ಕೆಳಮಟ್ಟದ ಕಾಲುವೆ ನಿರ್ಮಿಸಿದೆ. ಕಾಲುವೆಯಿಂದ ಮಹದಾಯಿ ನೀರನ್ನು ಮಲಪ್ರಭಾಕ್ಕೆ ಹರಿಸುತ್ತಿದೆ. ಕರ್ನಾಟಕಕ್ಕೆ ನೀರು ಹರಿಯುವುದನ್ನು ತಡೆಯದಿದ್ದರೆ ಮಹದಾಯಿ ನದಿ ಒಣಗಿ ಹೋಗಲಿದೆ. ಕರ್ನಾಟಕ ವಿರುದ್ಧ ನೀರು ಕೊಡುವುದಿಲ್ಲ ಎಂದು  ಗೋವಾ ಅಸೆಂಬ್ಲಿಯಲ್ಲಿ ತಿರ್ಮಾನಿಸಲಾಗಿದೆ. ಈ ವಿವಾದವು ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗಬೇಕು. ಗೋವಾ ಅಸೆಂಬ್ಲಿಯಲ್ಲಿ ಒಮ್ಮತ ನಿರ್ಣಯ ತೆಗೆದುಕೊಂಡರೆ ಸಿಎಂ ಪರಿಕ್ಕರ್ ಪತ್ರವೂ ಮೌಲ್ಯ ಕಳೆದುಕೊಳ್ಳಲಿದೆ. ಪ್ರಧಾನಿ ಮೋದಿ ಮಧ್ಯಸ್ಥಿಕೆಯು ಕೈಗೂಡುವುದಿಲ್ಲ. ಮಹದಾಯಿ ವಿವಾದ ಇನ್ನಷ್ಟು ಕಗ್ಗಂಟಾಗಲಿದೆ’ ಎಂದು ಗೋವಾ ಡೆಪ್ಯುಟಿ ಸ್ಪೀಕರ್ ಮೈಕಲ್ ಲೋಬೋ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ