ಇತ್ತೀಚೆಗೆ ಕೆಲವರು ಮಾಂಸಾಹಾರ ಸೇವನೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಸಂಪೂರ್ಣ ಸಸ್ಯಾಹಾರಿಯಾಗುತ್ತಿದ್ದಾರೆ. ಹುಟ್ಟಿನಿಂದಲೇ ಮಾಂಸಾಹಾರಿಯಾಗಿದ್ದವರು ಇದ್ದಕ್ಕಿದ್ದಂತೆ ಸಂಪೂರ್ಣ ಸಸ್ಯಾಹಾರಿಯಾದರೆ ಏನಾಗುತ್ತದೆ ಎಂದು ಖ್ಯಾತ ವೈದ್ಯ ಡಾ ದೇವಿ ಪ್ರಸಾದ್ ಶೆಟ್ಟಿ ಹಿಂದೊಮ್ಮೆ ಹೇಳಿದ್ದರು. ಅವರ ಸಲಹೆ ನೋಡಿ.
ಮಾಂಸಾಹಾರ ಸೇವನೆಯಿಂದ ಹೊಟ್ಟೆ ಉರಿ, ಅಸಿಡಿಟಿ, ಕೊಬ್ಬಿನ ಸಮಸ್ಯೆಯಾಗುತ್ತದೆ. ಫಿಟ್ ಆಗಿರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕೆಲವು ಶುದ್ಧ ಶಾಕಾಹಾರಿಗಳಾಗುತ್ತಾರೆ. ಇದು ಎಷ್ಟರ ಮಟ್ಟಿಗೆ ಸರಿ? ಸಸ್ಯಾಹಾರ ಮಾತ್ರ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಸುತ್ತದೆಯೇ?
ಡಾ ದೇವಿ ಪ್ರಸಾದ್ ಶೆಟ್ಟಿ ಸಂವಾದವೊಂದರಲ್ಲಿ ಹೇಳಿರುವ ಪ್ರಕಾರ, ಮಾಂಸಾಹಾರ ತ್ಯಜಿಸುವುದರಿಂದ ಎಲ್ಲಾ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದಲ್ಲ. ನಮ್ಮ ಆಹಾರ ಶೈಲಿ ನಾವು ಬಾಲ್ಯದಿಂದ ಹೇಗೆ ರೂಢಿಸಿಕೊಂಡಿದ್ದೇವೆ ಅದೇ ರೀತಿ ಇದ್ದರೆ ತಪ್ಪಲ್ಲ. ಒಂದು ವೇಳೆ ನೀವು ಬಾಲ್ಯದಿಂದಲೇ ಮಾಂಸಾಹಾರ ಸೇವನೆ ಮಾಡುತ್ತಿದ್ದರೆ ಇದ್ದಕ್ಕಿದ್ದಂತೆ ಸಂಪೂರ್ಣ ಸಸ್ಯಾಹಾರಿಯಾಗುವುದರಿಂದ ಆರೋಗ್ಯ ವೃದ್ಧಿಯಾಗಲ್ಲ.
ಸಸ್ಯಾಹಾರವಿರಲಿ, ಮಾಂಸಾಹಾರವಿರಲಿ ನಾವು ಎಷ್ಟು ಆರೋಗ್ಯಕರ ಆಹಾರ ಶೈಲಿ ಹೊಂದಿದ್ದೇವೆ ಎಂಬುದರ ಮೇಲೆ ನಮ್ಮ ಆರೋಗ್ಯ ನಿರ್ಧಾರವಾಗುತ್ತದೆ ಎಂದು ಅವರು ಒಮ್ಮೆ ಸಲಹೆ ನೀಡಿದ್ದರು.