ನೀವು ಚಪ್ಪರಿಸಿ ತಿನ್ನುವ ಗೋಬಿ ಮಂಚೂರಿಗೆ ಕರ್ನಾಟಕದಲ್ಲಿ ನಿಷೇಧ
ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕ ಅಂಶ ಮತ್ತು ಬಣ್ಣ ಮಿಶ್ರಣ ಮಾಡಲಾಗುತ್ತದೆ ಎಂಬುದು ಬೆಳಕಿಗೆ ಬಂದಿದೆ. ಈ ಅಸುರಕ್ಷಿತ ರಾಸಾಯನಿಕಗಳನ್ನು ಬಳಸದಂತೆ ಆರೋಗ್ಯ ಇಲಾಖೆ ಕಡಿವಾಣ ಹಾಕಲು ಮುಂದಾಗಿದೆ. ಈ ಬಗ್ಗೆ ಸದ್ಯದಲ್ಲೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.
ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ವಿಭಾಗವು ಈಗಾಗಲೇ ಈ ಎರಡೂ ಆಹಾರ ವಸ್ತುಗಳ ಸ್ಯಾಂಪಲ್ ಪರೀಕ್ಷೆ ಮಾಡಿದೆ. ಈ ಮೂಲಕ ಆರೋಗ್ಯಕ್ಕೆ ಹಾನಿಕಾರಕವಾದ ಅಂಶ ಪತ್ತೆಯಾಗಿತ್ತು. ಈ ಹಿನ್ನಲೆಯಲ್ಲಿ ಇಂದೇ ಆರೋಗ್ಯ ಸಚಿವರು ಈ ಬಗ್ಗೆ ಘೋಷಣೆ ಹೊರಡಿಸಲಿದ್ದಾರೆ.
ಈಗಾಗಲೇ ಪುದುಚೇರಿಯಲ್ಲಿ ಕಾಟನ್ ಕಾಂಡಿಗೆ ಅಸುರಕ್ಷಿತ ರಾಸಾಯನಿಕ ಬಳಸಲಾಗುತ್ತದೆ ಎಂಬ ಕಾರಣಕ್ಕೆ ನಿಷೇಧ ಹೇರಲಾಗಿದೆ. ಇದೀಗ ಕರ್ನಾಟಕದಲ್ಲೂ ಇದೇ ಕ್ರಮ ಕೈಗೊಳ್ಳುವ ಸಾಧ‍್ಯತೆಯಿದೆ. ಹೀಗಾಗಿ ಗೋಬಿ ಮಂಚೂರಿ ಸಿಕ್ಕ ಸಿಕ್ಕಲ್ಲಿ ತಿನ್ನುವ ಮೊದಲು ಹುಷಾರು!