ಗೋಲ್ ಗಪ್ಪಾ ಚಪ್ಪರಿಸಿಕೊಂಡು ತಿನ್ನುತ್ತೀರಾ: ಹಾಗಿದ್ದರೆ ಇಂದೇ ಇದಕ್ಕೆಲ್ಲಾ ದಿ ಎಂಡ್ ಕೊಡಿ

Krishnaveni K

ಸೋಮವಾರ, 28 ಅಕ್ಟೋಬರ್ 2024 (11:15 IST)
ಬೆಂಗಳೂರು: ಬೀದಿ ಬದಿಯಲ್ಲಿ ಸಿಗುವ ಗೋಲ್ ಗಪ್ಪಾ ಚಪ್ಪರಿಸಿಕೊಂಡು ತಿನ್ನುವ ಮೊದಲು ಈ ಸುದ್ದಿಯನ್ನು ಓದಿ. ಯಾಕೆಂದರೆ ಗೋಲ್ ಗಪ್ಪಾದಲ್ಲಿ ವಿಷಕಾರೀ ಅಂಶ ಬಳಕೆಯಾಗುತ್ತಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.

ಆಹಾರ ಇಲಾಖೆ ಇತ್ತೀಚೆಗೆ ಹಲವು ಬೀದಿ ಬದಿ ಆಹಾರಗಳು, ಕೇಕ್ ನಂತಹ ಬೇಕರಿ ವಸ್ತುಗಳ ಗುಣಮಟ್ಟ ಪರೀಕ್ಷೆ ನಡೆಸುತ್ತಿದೆ. ಇತ್ತೀಚೆಗಷ್ಟೇ ಕೆಲವು ಕೇಕ್ ಮತ್ತು ತುಪ್ಪಗಳಲ್ಲಿ ವಿಷಕಾರೀ ಅಂಶವಿರುವುದು ಪತ್ತೆಯಾಗಿತ್ತು. ಇದೀಗ ಗೋಲ್ ಗಪ್ಪಾ ಸರದಿ.

ಗೋಲ್ ಗಪ್ಪಾ ಬಗ್ಗೆ ಅನೇಕ ದೂರುಗಳು ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಆಹಾರ ಇಲಾಖೆ ಗೋಲ್ ಗಪ್ಪಾ ಗುಣಮಟ್ಟ ಪರೀಕ್ಷೆಗೆ ಮುಂದಾಗಿದೆ. ಗೋಲ್ ಗಪ್ಪಾ ತಯಾರಿಕಾ ಘಟಕಗಳ ಮೇಲೂ ನಿಗಾ ಇರಿಸಿದೆ. ಬೆಂಗಳೂರಿನ ಕೆಲವು ಕೇಂದ್ರಗಳ ಗೋಲ್ ಗಪ್ಪಾಗಳನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ.

ಕರ್ನಾಟಕದಾದ್ಯಂತ ಸುಮಾರು 200 ಗೋಲ್ ಗಪ್ಪಾ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದೆ. ಗೋಲ್ ಗಪ್ಪಾಗೆ ಬಳಸುವ ವಸ್ತುಗಳು ಕಳಪೆ ಮಟ್ಟದ್ದು ಎಂಬ ಆರೋಪಗಳು ಬಂದ ಹಿನ್ನಲೆಯಲ್ಲಿ ಯಾವ ವಸ್ತುಗಳನ್ನು ಬಳಸಲಾಗುತ್ತಿದೆ, ಎಲ್ಲಿ ತಯಾರಿಸಲಾಗುತ್ತಿದೆ ಎಂದು ಪರೀಕ್ಷೆಗೊಳಪಡಿಸಲಾಗುತ್ತಿದೆ.

ಗೋಲ್ ಗಪ್ಪಾ ರುಚಿ ಹೆಚ್ಚಿಸಲು ಟಾಯ್ಲೆಟ್ ಕ್ಲೀನರ್, ಗೊಬ್ಬರದಂತಹ ವಿಷಕಾರೀ ಅಂಶವನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಒಂದು ವೇಳೆ ಹಾನಿಕಾರಕ ಅಂಶಗಳು ಇರುವುದು ಖಚಿತವಾದಲ್ಲಿ ರಾಜ್ಯದಲ್ಲಿ ನೀವು ಚಪ್ಪರಿಸಿಕೊಂಡು ತಿನ್ನುವ ಗೋಲ್ ಗಪ್ಪಾ ನಿಷೇಧವಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ