ಬಿಬಿಎಂಪಿ ಎಲೆಕ್ಷನ್ ಮಾಹಿತಿ ಸಂಗ್ರಹದಲ್ಲಿ ಗೋಲ್ ಮಾಲ್ ಆರೋಪ
ಬಿಬಿಎಂಪಿ ಎಲೆಕ್ಷನ್ ಮಾಹಿತಿ ಸಂಗ್ರಹದಲ್ಲಿ ಗೋಲ್ ಮಾಲ್ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದ ಬಗ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಸ್ಪಷ್ಟನೆ ನೀಡಿದ್ದಾರೆ.ಚಿಲುಮೆ ಸಂಸ್ಥೆಯನ್ನ ರದ್ದು ಮಾಡಿದ್ದೇವೆ.ಸಂಸ್ಥೆಯವರು ಮಾಹಿತಿ ಸಂಗ್ರಹ ಮಾಡಿದ್ರೆ ಎಲೆಕ್ಷನ್ ಕಮಿಟಿ ಆದೇಶದಂತೆ ಕ್ರಮ ತೆಗೆದುಕೊಳ್ಳುತ್ತೇವೆ.ಚಿಲುಮೆ ಸಂಸ್ಥೆಗೆ ಕೇವಲ ಜಾಗೃತಿ ಮಾಡಿಸಲು ಮಾತ್ರ ಅನುಮತಿ ನೀಡಿದ್ದೇವು.ಯಾವುದೇ ರೀತಿಯ ಮತದಾರರ ಮಾಹಿತಿಯನ್ನ ಸಂಗ್ರಹ ಮಾಡಿಲ್ಲ.ಮತದಾರರ ಆಧಾರ್ ಕಾರ್ಡ್ ಲಿಂಕ್ ಮಾಡೋ ಕೆಲಸ ಮಾತ್ರ ಮಾಡಲಾಗಿದೆ.ಚಿಲುಮೆ ಸಂಸ್ಥೆ ಅವಕಾಶವನ್ನ ದುರುಪಯೋಗ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ.ಇದೇ ಮೊದಲಲ್ಲ 2018 ರಲ್ಲೂ ಮತದಾರರ ಜಾಗೃತಿ ಕಾರ್ಯಕ್ರಮ ಮಾಡಲಾಗಿತ್ತು.ಜಾಗೃತಿ ಮೂಡಿಸುವ ಕೆಲಸ ಹೊರತುಪಡಿಸಿ ಕ್ಯಾಂಪೇನ್ ಮಾಡಿಲ್ಲ.ಮತದಾರರ ಮನೆಗಳಿಗೆ ಹೋಗುತ್ತಿರೋದು ನಮ್ಮ ಬೂತ್ ಲೆವೆಲ್ ಅಧಿಕಾರಿಗಳು ಮಾತ್ರ ಎಂದು ಹೇಳಿದ್ದಾರೆ.