ಚಿನ್ನದ ಸಾಧಕರು ನಾಡಿಗೆ ಹೆಮ್ಮೆ..!!

ಶನಿವಾರ, 10 ಸೆಪ್ಟಂಬರ್ 2022 (14:38 IST)
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಚಿನ್ನದ ಹೊಳಪಿನಲ್ಲಿ ಕಂಗೊಳಿಸಿದರು.
 
ಹಾಸನದ ಕೃಷಿ ಮಹಾವಿದ್ಯಾಲಯದಲ್ಲಿ ಓದಿದ ತುಮಕೂರಿನ ಎಚ್.ಎಂ.ಚಂದನಾ ಬಿಎಸ್ಸಿ (ಆನರ್ಸ್‌) ಕೃಷಿಯಲ್ಲಿ 11 ಚಿನ್ನದ ಪದಕ ದಕ್ಕಿಸಿಕೊಂಡು ಚಿನ್ನದ ಬೆಡಗಿಯಾಗಿ ಕಂಗೊ
ಳಿಸಿದರು. ಜತೆಗೆ, ದಾನಿಗಳ 5 ಚಿನ್ನದ ಪದಕ ಪ್ರಮಾಣ ಪತ್ರಗಳೂ ಸಿಕ್ಕಿವೆ.
 
ರಾಜ್ಯಪಾಲ ಥಾವರಚಂದ್ ಗೆಹಲೋತ್ ಪದಕ ಪ್ರದಾನ ಮಾಡು
ತ್ತಿದ್ದಂತೆ ತಂದೆ ಸುರೇಶ್‌, ತಾಯಿ ಶಶಿಕಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 16 ಪದಕ ಗಳಿಸಿದ ಚಂದನಾ
ಸಾಧನೆಗೆ ಸಾಕ್ಷಿಯಾಗಲು ಪ್ರಾಧ್ಯಾಪಕ ಚನ್ನಕೇಶ ಬಂದಿದ್ದರು. ಪುತ್ರಿಯ ಸಾಧನೆಗೆ ತಂದೆ ಚಿನ್ನದ ಬಳೆ ಕೊಡುಗೆಯಾಗಿ ನೀಡಿದರು.
 
ರೂಪಾಗೆ 8 ಚಿನ್ನದ ಪದಕ: ಮಂಡ್ಯದ ಹುಡುಗಿ ಎಂ.ಎನ್‌.ರೂಪಾ ಬಿಎಸ್ಸಿ ಕೃಷಿಯಲ್ಲಿ ಒಟ್ಟು 8 ಚಿನ್ನದ ಪದಕ ಪಡೆದು ಮಿಂಚಿದರು.
 
'ತಂದೆ ಮಳವಳ್ಳಿಯಲ್ಲಿ ಟೀ ಅಂಗಡಿ ನಡೆಸುತ್ತಿದ್ದಾರೆ. ಊರಿನಲ್ಲಿ 20 ಗುಂಟೆ ಕೃಷಿ ಜಮೀನಿದೆ. ಟೀ ಅಂಗಡಿಯಿಂದ ಬರುವ ಆದಾಯದಲ್ಲೇ ಶಿಕ್ಷಣ ಕೊಡಿಸಿದರು' ಎಂದರು ಮಂಡ್ಯದ ಕೃಷಿ ಕಾಲೇಜಿನ ವಿದ್ಯಾರ್ಥಿನಿ ರೂಪಾ..
 
ಘಟಿಕೋತ್ಸವದಲ್ಲಿ 47 ವಿದ್ಯಾರ್ಥಿನಿಯರು, 18 ವಿದ್ಯಾರ್ಥಿಗಳಿಗೆ ಒಟ್ಟು 156 ಚಿನ್ನದ ಪದಕ ಪ್ರದಾನ ಮಾಡಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ