ಮಗುವಿಗೋಸ್ಕರ ಹುಲಿ ಜತೆ ಬಡಿದಾಡಿದ ಮಹಾತಾಯಿ

ಗುರುವಾರ, 8 ಸೆಪ್ಟಂಬರ್ 2022 (16:54 IST)
ತಾಯಿಯೊಬ್ಬರು ಹುಲಿ ಜೊತೆ ಕಾದಾಡಿ ಕೊನೆಗೂ ಮಗುವನ್ನ ರಕ್ಷಿಸಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.15 ತಿಂಗಳ ಮಗುವನ್ನ ರಕ್ಷಿಸಿದ 25 ವರ್ಷದ ಅರ್ಚನಾರ ಧೈರ್ಯಕ್ಕೆ ಈಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ಭಾನುವಾರ ತಮ್ಮ ಮಗುವಿನೊಂದಿಗೆ ಮನೆಯಿಂದ ಹೊರಬಂದಾಗ ಹತ್ತಿರದ ಬಾಂದವ್‌ಗಢ ಟೈಗರ್‌ ರಿಸರ್ವ್‌ನಿಂದ ಬಂದಿದ್ದ ಹುಲಿಯೊಂದು ದಾಳಿ ಮಾಡಿದೆ. ಅರ್ಚನಾ ಕೈಯಿಂದ ಮಗುವನ್ನ ಹುಲಿ ಕಿತ್ತುಕೊಳ್ಳಲು ಪ್ರಯತ್ನ ಪಟ್ಟಿದೆ. ಈ ವೇಳೆ ಹುಲಿಯಿಂದ ತನ್ನ ಮಗುವನ್ನ ಉಳಿಸಿಕೊಳ್ಳೋದಕ್ಕೆ ಕಾದಾಡಿದ್ದಾರೆ. ಸ್ವಲ್ಪ ಸಮಯದಲ್ಲೇ ಇವರು ಕಿರುಚೊ ಶಬ್ದ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಹುಲಿ ಓಡಿಹೋಗಿದೆ. ಮಗುವಿಗೆ ತಲೆಯಲ್ಲಿ ಗಾಯಗಳಾಗಿದ್ರೆ, ಅರ್ಚನಾಗೆ ಮೈತುಂಬಾ ಗಾಯಗಳಾಗಿವೆ. ಇದೀಗ ಇಬ್ಬರೂ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಅಂತ ಸ್ಥಳೀಯ ಅಧಿಕಾರಿಯೊಬ್ರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ