ಮೋಸ ಹೋದ ಚಿನ್ನದ ವ್ಯಾಪಾರಿ: ಸೆಲ್ಫಿ ವಿಡಿಯೋ ಸಾವಿನ ಸುಳಿವು ನೀಡಿ ಕಾಣೆ

ಬುಧವಾರ, 11 ಜುಲೈ 2018 (16:58 IST)
ತನ್ನ ಆಸ್ತಿಯನ್ನ ಅಡವಿಟ್ಟು ಹಣ ಪಡೆಯದೆ ಮೋಸ ಹೋದ ಚಿನ್ನದ ವ್ಯಾಪಾರಿಯೊಬ್ಬ ಮನನೊಂದು ವಾಟ್ಸ್ ಆಪ್ ನಲ್ಲಿ ತನ್ನ ಸಾವಿನ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ ಕಾಣೆಯಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ:
 ಮೋಸ ಹೋದ ಬಟ್ಟೆ ಮತ್ತು ಚಿನ್ನದ ವ್ಯಾಪಾರಿ ಸುಖಲಾಲ್ ಅಲಿಯಾಸ್ ಸುರೇಶ್. ಈತ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಬಟ್ಟೆ ಮತ್ತು ಚಿನ್ನದ ವ್ಯಾಪಾರಿಯಾಗಿದ್ದು, ಪರವಿಂದ್ ಎಂಬ ಹೆಸರಿನ ಅಂಗಡಿ ನಡೆಸುತ್ತಿದ್ದ. ಈತನಿಗೆ ನಾಲ್ಕು ಜನ ಮಕ್ಕಳಿದ್ದು ಜೂನ್ 7 ರಂದು ಮಕ್ಕಳನ್ನ ಕಾನ್ವೆಂಟ್ ಗೆ ಬಿಟ್ಟು ಮೈಸೂರು ಕೋರ್ಟ್ ಗೆ ಹೋಗಿ ಬರುತ್ತೇನೆಂದು ಹೇಳಿ ತನ್ನ ಕಾರ್ ನಲ್ಲಿ ಹೋದವ ಜೂನ್ 8 ರಂದು ಪತ್ನಿ ಸುನೀತಾಳ ಮೊಬೈಲ್ ವಾಟ್ಸ್ ಆಪ್ ನಲ್ಲಿ ತನಗಾದ ಅನ್ಯಾಯ ಹಾಗೂ ಮೋಸದ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ ತನ್ನ ಸಾವಿನ ಸೂಚನೆ ನೀಡಿ ಕಾಣೆಯಾಗಿದ್ದಾನೆ.

ಸೆಲ್ಫಿ ವಿಡಿಯೋದಲ್ಲೇನಿದೆ:
ನಾನು ಜನರಿಗೆ 12 ಲಕ್ಷ ಹಣ ನೀಡಬೇಕಾಗಿತ್ತು. ಇದರಿಂದ ಅದೇ ಗ್ರಾಮದ ಸ್ವಾಮಿ ಮಾಸ್ಟರ್ ಎಂಬುವವರಿಗೆ ನನ್ನ ಮನೆ ಹಾಗೂ ಗೋಡನ್ ಬರದು ಕೊಟ್ಟು ಒಂದು ರೂಪಾಯಿ ಬಡ್ಡಿ ದರದಲ್ಲಿ ಹಣ ಪಡೆಯಲು ಹೋಗಿದೆ. ಆದರೆ ಅಂದು ನನಗೆ ಸ್ವಾಮಿ ಮಾಸ್ಟರ್ ಬೆಳಗ್ಗೆ ಹಣ ನೀಡುತ್ತೇನೆಂದು ಆಸ್ತಿಯ ಎಲ್ಲಾ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಕಳುಹಿಸಿದ್ದಾನೆ. ಬೆಳಗ್ಗೆ ಹಣ ಪಡೆಯಲು ಹೋದಾಗ ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಒಂದುವರೆ ಲಕ್ಷ ಮಾತ್ರ ಇರುವುದು ಎಂದು ಹಣ ನೀಡದೆ ಕಳುಹಿಸಿದ. ಈತನಿಗೆ ನಾನು ಈ ಹಿಂದೆ 1 ರಿಂದ ಒಂದುವರೆ ಕೋಟಿ ಬಡ್ಡಿ ಹಣವನ್ನೇ ಕಟ್ಟಿದ್ದೇನೆ. ಈತ ನನಗೆ ಮೋಸ ಮಾಡಿದ್ದಾನೆ. ನಾನು ಜನರಿಗೆ  ಏನು ಉತ್ತರ ಹೇಳಬೇಕು ಎಂದು ಭಯಗೊಂಡು ಸಾಯಲು ನಿರ್ಧರಿಸಿದ್ದೇನೆ. ನಾನು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನನ್ನ ಹುಡುಕುವ ಪ್ರಯತ್ನ ಬೇಡ. ಹುಡುಕಿದರು ನನ್ನ ಮೊಬೈಲ್ ನೆಟ್ ವರ್ಕ್ ನಿಂದ ಮಾತ್ರ ಸಾಧ್ಯ. ಎಲ್ಲಾ ಮಕ್ಕಳನ್ನ ಆನಾಥಾಶ್ರಮಕ್ಕೆ ಸೇರಿಸು. ನಾನು ಏನು ಮಾಡಲು ಸಾಧ್ಯವಾಗುತ್ತಿಲ್ಲ. ನನನ್ನು ಕ್ಷಮೀಸು ಎಂದು ಸೆಲ್ಫಿ ವಿಡಿಯೋ ಮಾಡಿ ಸುರೇಶ್ ಕಾಣೆಯಾಗಿದ್ದಾರೆ.

ಈ ಸಂಬಂಧ ಹೆಂಡತಿ ಸುನೀತಾ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈತನನ್ನ ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ