ವಿದೇಶಗಳಿಂದ ದುಬಾರಿ ಬೆಲೆಯ ವಸ್ತುಗಳನ್ನು ಕೊಂಡುಕೊಂಡ್ರೆ ಭಾರತಕ್ಕೆ ಅದನ್ನು ತರಲು ಅಧಿಕ ಆಮದು ಸುಂಕವನ್ನು ತೆರಬೇಕು. ಇದನ್ನ ಅರಿತ ಕೆಲ ಮಂದಿ ಕಳ್ಳಸಾಗಾಣಿಕೆ ಮೂಲಕ ವಸ್ತುಗಳನ್ನು ತರಲು ಮುಂದಾಗ್ತಾರೆ. ವಿದೇಶದಲ್ಲಿ ಆ ವಸ್ತುಗಳು ಅಗ್ಗವಾಗಿ ದೊರೆಯುತ್ತವೆ. ಇದನ್ನರಿತ ಕೆಲ ಮಂದಿ ದೇಶಕ್ಕೆ ತೆರಿಗೆ ವಂಚನೆ ಮಾಡಲು ಕಳ್ಳ ಮಾರ್ಗ ಅನುಸರಿಸುತ್ತಾರೆ. ರಿಯಾದ್‌ನಿಂದ ಆಗಮಿಸಿದ ಭಾರತೀಯ ಪ್ರಯಾಣಿಕರೊಬ್ಬರಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ನವದೆಹಲಿಯ IGI ವಿಮಾನ ನಿಲ್ದಾಣದ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಯಾಣಿಕನಿಂದ 69.99 ಲಕ್ಷ ಮೌಲ್ಯದ 1.5 ಕೆಜಿ ತೂಕದ ಎರಡು ಸಿಲಿಂಡರ್ ಆಕಾರದ ಚಿನ್ನದ ಲೋಹದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಯಾಣಿಕನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.