ಕೊರೊನಾ ವೈರಸ್ ಗೆ ಗುಡ್ ಬೈ ಹೇಳಿದ ಊರು
ಡೆಡ್ಲಿ ಕೊರೊನಾಕ್ಕೆ ಇಲ್ಲಿನ ಜನರು ಗುಡ್ ಬೈ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಕಾಣಿಸಿಕೊಂಡಿದ್ದು ಹೊಸಪೇಟೆಯಲ್ಲಿಯೇ. ಈ ನಗರದಲ್ಲಿ 11 ಜನರಿಗೆ ಈ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲಾ ಈಗ ಗುಣ ಮುಖರಾಗಿದ್ದಾರೆ.
ಈ ವರಗೆ 17 ಜನರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಅವರ ಪೈಕಿ ಇಲ್ಲಿವರೆಗೆ ಗುಣಮುಖರಾಗಿ 13 ಜನರು ಬಿಡುಗಡೆ ಹೊಂದಿದಂತಾಗಿದೆ. ಇನ್ನೂ ಬಳ್ಳಾರಿ, ಸಿರಗುಪ್ಪ, ಕಂಪ್ಲಿ ಮತ್ತು ಸಂಡೂರು ತಾಲೂಕಿನ ತಲಾ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.