ಗೌರವ್ ಕಾಶಿ ದರ್ಶನ್ ಯಾತ್ರೆಯ 5ನೇ ಟ್ರಿಪ್ ದಿನಾಂಕ ನಿಗದಿಯಾಗಿದ್ದು, ದಿನಾಂಕ 29ರಂದು ಕಾಶಿ ದರ್ಶನ್ ಯಾತ್ರೆಯ 5ನೇ ಟ್ರಿಪ್ ಹೊರಡಲಿದೆ. ಇನ್ನು ಕಳೆದ ಬಾರಿ ಪ್ರಚಾರ ಸ್ವಲ್ಪ ಕಡಿಮೆ ಇತ್ತು ಹೆಚ್ಚು ಪ್ರಚಾರ ಮಾಡಿದ್ರೆ ಇನ್ನ ಸ್ವಲ್ಪ ಜನ್ರು ಬರುತ್ತಿದ್ರು. ಹೀಗಾಗಿ ಆಗಸ್ಟ್ ೧೫ ಕ್ಕೆ ಇದ್ದ ಐದನೇ ಬಾರಿಯ ಟ್ರಿಪ್ ನ್ನು ಮುಂದಕ್ಕೆ ಹಾಕಲಾಗಿದೆ. ದಿನಾಂಕ 6 ರಂದು ಯಾತ್ರೆ ಮುಗಿಸಿ ಆಗಮಿಸಲಿರುವ ಕಾಶಿ ಯಾತ್ರೆ ರೈಲು, ಸೆಪ್ಟೆಂಬರ್ ತಿಂಗಳಲ್ಲಿ 6ನೇ ಟ್ರೀಪ್ ಹೊರಡಲಿದೆ.
ಕಾಶಿ ಯಾತ್ರೆಯ 6ನೇ ಟ್ರಿಪ್ ಸೆಪ್ಟೆಂಬರ್ 23 ರಂದು ಹೊರಡಲಿದ್ದು, ಅಕ್ಟೊಬರ್ 2ರಂದು ಕಾಶಿ ಯಾತ್ರೆಯ ಆರನೇ ಟ್ರಿಪ್ ವಾಪಸ್ ಆಗಲಿದೆ. ರಾಜ್ಯ ಸರ್ಕಾರ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಪ್ಯಾಕೇಜ್‍ನಲ್ಲಿ ಕೆಲವು ಬದಲಾವಣೆ ಮಾಡಿದ್ದು, ಕೈಗೊಳ್ಳುವ ಪ್ರತಿ ಯಾತ್ರಿಕರಿಗೆ ನೀಡುವ ಸಬ್ಸಿಡಿಯನ್ನು ಸಹ ಏರಿಕೆ ಮಾಡಿದೆ. ರಾಜ್ಯ ಸರ್ಕಾರದಿಂದ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಕಾಶಿಯಾತ್ರೆಗೆ ನೀಡಲಾಗುತ್ತಿರುವ ಸಬ್ಸಿಡಿಯನ್ನು 5 ಸಾವಿರದಿಂದ 7,500ಕ್ಕೆ ಹೆಚ್ಚಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗತ್ತದೆ ಅಂತ ಮುಜರಾಯಿ ಖಾತೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯೋಜನೆಯಡಿ ಸುಗಮ ಮತ್ತು ಅನುಕೂಲಕ್ಕೆ ತಕ್ಕಂತೆ ರೈಲು ಪ್ರಯಾಣ, ವಸತಿ ಮತ್ತು ದರ್ಶನ ಮಾಡುವ ಎಲ್ಲ ಸೌಲಭ್ಯಗಳನ್ನು ಭಾರತ್ ಗೌರವ್ ರೈಲು ಪ್ಯಾಕೇಜ್ ಒಳಗೊಂಡಿದೆ. ಈ ಯೋಜನೆಗೆ 2022ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆಯಡಿ 4ನೇ ಸುತ್ತಿನ ಯಾತ್ರೆ ಜುಲೈ 29ರಂದು ಆರಂಭವಾಗಿದೆ. ಈಗ ಪ್ಯಾಕೇಜ್ ನಲ್ಲಿ ಬದಲಾವಣೆ ಮಾಡಲಾಗಿದೆ. ಪ್ಯಾಕೇಜ್ ಯೋಜನೆಯಡಿಯಲ್ಲಿ ಹೊಸದಾಗಿ ಎಲ್ ಎಚ್‍ಬಿ ಕೋಚ್‍ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಇರುತ್ತದೆ. ಅಲ್ಲದೇ ಇಬ್ಬರು ವೈದ್ಯರು ಯಾತ್ರಾರ್ಥಿಗಳ ಸೇವೆಗೆ ಇರಲಿದ್ದಾರೆ.