ಸಾಲ ನೀಡುವ ಆ್ಯಪ್ ಗಳನ್ನ ತೆಗೆದುಹಾಕಿದ ಗೂಗಲ್

ಶುಕ್ರವಾರ, 26 ಆಗಸ್ಟ್ 2022 (19:09 IST)
ಪ್ಲೇಸ್ಟೋರ್​ನಲ್ಲಿರುವ ಸುಮಾರು 2000ಕ್ಕೂ ಹೆಚ್ಚು ಸಾಲ ನೀಡುವ ಆಯಪ್​ಗಳನ್ನು ಗೂಗಲ್ ತೆಗೆದುಹಾಕಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಆಯಪ್​ಗಳ ಮೇಲಿನ ನಿಯಮಾವಳಿಗಳು ಕಠಿಣಗೊಳಿಸುವ ಸಾಧ್ಯಯತೆ ಇದೆ.
ಮಾತನಾಡಿದ ಗೂಗಲ್ ಹಿರಿಯ ನಿರ್ದೇಶಕ, ಏಷ್ಯಾ ಪೆಸಿಫಿಕ್ ಟ್ರಸ್ಟ್ ಮತ್ತು ಸೆಕ್ಯುರಿಟಿ ಮುಖ್ಯಸ್ಥ ಸೈಕತ್ ಮಿತ್ರಾ, ಕಂಪನಿಯು ಕಾರ್ಯನಿರ್ವಹಿಸುವ ಎಲ್ಲಾ ಕ್ಷೇತ್ರಗಳಲ್ಲಿ ನಿಯಮಾವಳಿಗಳನ್ನು ಅನುಸರಿಸಲು ಬದ್ಧವಾಗಿದೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ವಂಚನೆಗಳನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜನವರಿಯಿಂದ ಭಾರತದಲ್ಲಿ ಪ್ಲೇ ಸ್ಟೋರ್‌ನಿಂದ ಸಾಲ ನೀಡುವ 2,000ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. ಕಾರ್ಯವಿಧಾನಗಳ ಉಲ್ಲಂಘನೆ, ಮಾಹಿತಿ ಬಹಿರಂಗಪಡಿಸದಿರುವುದು ಮತ್ತು ಸುಳ್ಳು ಮಾಹಿತಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ